ಇಂದಿರಾ ಭವನದ ಗೋಡೆಗಳು ಸತ್ಯ, ಅಹಿಂಸೆ, ತ್ಯಾಗ, ದೇಶಭಕ್ತಿಯ ಕಥೆಯನ್ನು ನಿರೂಪಿಸುತ್ತವೆ : ಕಾಂಗ್ರೆಸ್

ನವದೆಹಲಿ : ಇಂದಿರಾ ಭವನದ ಗೋಡೆಗಳು ಸತ್ಯ, ಅಹಿಂಸೆ, ತ್ಯಾಗ, ದೇಶಭಕ್ತಿಯ ಕಥೆಯನ್ನು ನಿರೂಪಿಸುತ್ತವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ದೆಹಲಿಯಲ್ಲಿ ಇಂದು ನೂತನ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಲಾಗಿದ್ದು, ಇಂದಿರಾ ಭವನ ಎಂದು ನಾಮಕರಣ ಮಾಡಲಾಗಿದೆ.  ಗೋಡೆಗಳು ಸತ್ಯ, ಅಹಿಂಸೆ, ತ್ಯಾಗ, ದೇಶಭಕ್ತಿಯ ಕಥೆಯನ್ನು ನಿರೂಪಿಸುತ್ತವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಇಂದಿರಾ ಭವನ’ ಪ್ರಜಾಪ್ರಭುತ್ವ, ರಾಷ್ಟ್ರೀಯತೆ, ಜಾತ್ಯಾತೀತತೆ, ಸಮಗ್ರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಅಡಿಪಾಯದ ಮೇಲೆ ಎಐಸಿಸಿ ನೂತನ ಕೇಂದ್ರ ಕಚೇರಿ ನಿರ್ಮಿಸಲಾಗಿದೆ. ಕಾಂಗ್ರೆಸ್ ನ 140 ವರ್ಷಗಳ ವೈಭವಯುತ ಇತಿಹಾಸವನ್ನು ಪಾಲಿಸುತ್ತಾ, ಇಲ್ಲಿನ ಗೋಡೆಗಳು ಸತ್ಯ, ಅಹಿಂಸೆ, ತ್ಯಾಗ, ಹೋರಾಟ ಮತ್ತು ದೇಶಭಕ್ತಿಯ ಕಥೆಯನ್ನು ನಿರೂಪಿಸುತ್ತವೆ. ಕಾಂಗ್ರೆಸ್ ಪಕ್ಷ ಹೊಸ ಶಕ್ತಿ, ಹೊಸ ಸಂಕಲ್ಪ, ಹೊಸ ವಿಶ್ವಾಸದೊಂದಿಗೆ ಭಾರತದ ಉಜ್ವಲ ಭವಿಷ್ಯ ರೂಪಿಸಲು ಶ್ರಮಿಸುವುದರ ಜೊತೆಗೆ ‘ನ್ಯಾಯ’ದ ಧ್ವಜವನ್ನು ಹಾರಿಸಲು ಸಿದ್ಧವಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read