‘ಕೇಳದೆ ನಿಮಗೀಗ’ ಕಿರುಚಿತ್ರದ ವಿಡಿಯೋ ಹಾಡು ರಿಲೀಸ್

ಈಗಾಗಲೇ ತನ್ನ ಟ್ರೈಲರ್ ಮೂಲಕ ಸಾಕಷ್ಟು ಮೆಚ್ಚುಗೆ ಪಡೆದಿರುವ ‘ಕೇಳದೆ ನಿಮಗೀಗ’ ಎಂಬ ಕಿರು ಚಿತ್ರದ ವಿಡಿಯೋ ಹಾಡನ್ನು ಆನಂದ್ ಆಡಿಯೋ ಕನ್ನಡ youtube ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಿರು ಚಿತ್ರದ ನಾಯಕ ವಿಕ್ರಾಂತ್ ಮಂದಾರ್ ಬೈಲ್ ಅವರೇ ಹಾಡಿಗೆ ಧ್ವನಿಯಾಗಿದ್ದು, ಎಟಿ ರವೀಶ್  ಸಂಗೀತ ಸಂಯೋಜನೆ ನೀಡಿದ್ದಾರೆ. ಎಚ್ ಕೆ ವಾಮನ್ ಸಂಜು ಸಾಹಿತ್ಯವಿದೆ.

ಈ ಶಾರ್ಟ್ ಫಿಲಂ ಅನ್ನು ಎಚ್ ಕೆ ವಾಮನ್ ಸಂಜು ನಿರ್ದೇಶಿಸಿದ್ದು, ವಿಕ್ರಾಂತ್ ಮಂದಾರ್ ಬೈಲ್ ಮತ್ತು ಪೂರ್ಣಿಮಾ ಗೌಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜಿ ಆರ್ ಸಿ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read