ಕಳೆದ ತಿಂಗಳು ಆಗಸ್ಟ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯಸಖಿ’ ಚಿತ್ರ ಇಂದಿಗೂ ಹೌಸ್ ಫುಲ್ ಆಗಿದ್ದು, ಫ್ಯಾಮಿಲಿ ಸಮೇತ ವೀಕ್ಷಣೆ ಮಾಡುತ್ತಿದ್ದಾರೆ. ಇದರ ಹಾಡುಗಳಂತೂ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು, ಗಾನ ಪ್ರಿಯರ ಬಾಯಲ್ಲಿ ನಲಿದಾಡುತ್ತಲೇ ಇವೆ.
‘ಕೃಷ್ಣಂ ಪ್ರಣಯಸಖಿ’ ಚಿತ್ರದ ‘ಕಾಡದೇಯೇ ಹೇಗಿರಲಿ’ ಎಂಬ ರೋಮ್ಯಾಂಟಿಕ್ ಮೆಲೋಡಿ ಹಾಡು ಕೂಡ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದ್ದು, ಈ ಹಾಡಿನ ಸಂಪೂರ್ಣ ವಿಡಿಯೋ ಹಾಡನ್ನು ನಾಳೆ ಆನಂದ್ ಆಡಿಯೋ ಯೂಟೂಬ್ ಚಾನೆಲಲ್ಲಿ ವೀಕ್ಷಿಸಬಹುದಾಗಿದೆ.
ನಾಳೆ ಸಂಜೆ 6:00 ಗಂಟೆಗೆ ಈ ಹಾಡು ರಿಲೀಸ್ ಆಗಲಿದ್ದು, ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಈ ಹಾಡಿಗೆ ಪೃಥ್ವಿ ಭಟ್ ಧ್ವನಿಯಾಗಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ.
https://twitter.com/aanandaaudio/status/1838916877713600867