ಅಶೋಕ್ ಅವರ ʻಸಂತೋಷʼದ ʻವ್ಯಾಲಿಡಿಟಿʼ ಶೀಘ್ರದಲ್ಲೇ ಮುಗಿಯುವ ಸೂಚನೆ ಸಿಕ್ಕಿದೆ : ಕಾಂಗ್ರೆಸ್ ಲೇವಡಿ

ಬೆಂಗಳೂರು : ವಿರೋಧ ಪಕ್ಷದ ನಾಯಕನಿಗೆ ಈ ಪರಿ ವಿರೋಧ ಸೃಷ್ಟಿಯಾಗಿದೆ ಎಂದರೆ ಅಶೋಕ್ ಅವರ ಸಂತೋಷದ ವ್ಯಾಲಿಡಿಟಿ ಶೀಘ್ರದಲ್ಲೇ ಮುಗಿಯುವ ಸೂಚನೆ ಅಲ್ಲವೇ ಎಂದು ರಾಜ್ಯ ಕಾಂಗ್ರೆಸ್‌ ಘಟಕ ವ್ಯಂಗ್ಯವಾಡಿದೆ. 

ಈ ಕುರಿತು ಎಕ್ಸ್‌ ನಲ್ಲಿ ಲೇವಡಿ ಮಾಡಿರುವ ಕಾಂಗ್ರೆಸ್‌, ವಿರೋಧ ಪಕ್ಷದ ನಾಯಕನ ಕಚೇರಿಯಿಂದ ಅಶೋಕ್ ಹೆಸರನ್ನು ತೆಗೆದರಷ್ಟೇ ಕಚೇರಿಗೆ ಹೋಗುವೆ ಎಂದು ಬಿಜೆಪಿ ಶಾಸಕ ಪಟ್ಟು ಹಿಡಿದಿದ್ದಾರೆ. ವಿರೋಧ ಪಕ್ಷದ ನಾಯಕನಿಗೆ ಈ ಪರಿ ವಿರೋಧ ಸೃಷ್ಟಿಯಾಗಿದೆ ಎಂದರೆ ಅಶೋಕ್ ಅವರ ಸಂತೋಷದ ವ್ಯಾಲಿಡಿಟಿ ಶೀಘ್ರದಲ್ಲೇ ಮುಗಿಯುವ ಸೂಚನೆ ಅಲ್ಲವೇ ಬಿಜೆಪಿ? ಯಾರು ಶತ್ರುಗಳು, ಯಾರು ಮಿತ್ರರು ಎಂದು ಸ್ವತಃ ಬಿಜೆಪಿಯವರಿಗೇ ಗೊಂದಲವಾಗುತ್ತಿದೆ ಎಂದು ಹೇಳಿದೆ.

ಆ’ಶೋಕ’ ಗೀತೆ!

◆ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ಶಾಸಕ ಅಭಿನಂದಿಸಲು ಒಪ್ಪಲಿಲ್ಲ.

◆ ಸಭಾತ್ಯಾಗ ಮಾಡಿದರೆ ಬಿಜೆಪಿ ಶಾಸಕರೇ ಕುರ್ಚಿ ಬಿಟ್ಟು ಏಳಲಿಲ್ಲ.

◆ ಶಾಸಕಾಂಗ ಸಭೆಗೆ ಬರುವುದಿಲ್ಲ ಎಂದು ಬಿಜೆಪಿ ಶಾಸಕರಿಂದಲೇ ಘೇರಾವ್.

◆ ವಿರೋಧ ಪಕ್ಷದ ನಾಯಕನ ಕೊಠಡಿಗೆ ಬರಲು ಒಪ್ಪದ ಬಿಜೆಪಿ ಶಾಸಕ.

◆ ಸಭಾತ್ಯಾಗ ಮಾಡಿರುವುದಕ್ಕೆ ಸ್ವಪಕ್ಷದ ಶಾಸಕರಿಂದಲೇ ತರಾಟೆ.

◆ ಬಕೆಟ್ ರಾಜಕಾರಣಿ ಎಂದು ಬಿಜೆಪಿಗರಿಂದಲೇ ಬಿರುದು.

◆ ವಿರೋಧ ಪಕ್ಷದ ನಾಯಕ ಎನ್ನುವುದನ್ನು ಮರೆತು ಸ್ವಪಕ್ಷದ ನಾಯಕರಿಂದಲೇ ಸದನದಲ್ಲಿ ಮಾತನಾಡಲು ಅಡ್ಡಿ.

ವಿರೋಧ ಪಕ್ಷದ ನಾಯಕನಿಗೆ ಮತ್ತೊಂದು ವಿರೋಧ ಪಕ್ಷ ಸೃಷ್ಟಿಯಾಗಿರುವಾಗ ಅಶೋಕರ ಶೋಕ ರಾಗವನ್ನು ಕೇಳುವವರು ಯಾರು? ಎಂದು ಪ್ರಶ್ನಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read