ಸದ್ಯ ಟಾಲಿವುಡ್ ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿರುವ ಅಶ್ವಿನ್ ಬಾಬು ಅಭಿನಯದ ‘ಶಿವಂ ಭಜೆ’ ಚಿತ್ರ ಆಗಸ್ಟ್ ಒಂದಕ್ಕೆ ತೆರೆ ಮೇಲೆ ಬರಲಿದ್ದು, ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಬಿಡುಗಡೆ ದಿನಾಂಕ ಹತ್ತಿರವಿರುವ ಕಾರಣ ಚಿತ್ರತಂಡ ನಾಳೆ ಟ್ರೈಲರ್ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದು, ಬೆಳಿಗ್ಗೆ 12:00 ಗಂಟೆಗೆ ತೆಲುಗು ಫಿಲಂ ನಗರ್ ಯೂಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ವೀಕ್ಷಿಸಬಹುದಾಗಿದೆ.
ಅಪ್ಸರ್ ನಿರ್ದೇಶನದ ಈ ಚಿತ್ರವನ್ನು ಗಂಗಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಲ್ಲಿ ಮಹೇಶ್ವರ ರೆಡ್ಡಿ ನಿರ್ಮಾಣ ಮಾಡಿದ್ದು, ವಿಕಾಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ಅಶ್ವಿನ್ ಬಾಬು ಸೇರಿದಂತೆ ದಿಗಂಗಣ ಸೂರ್ಯವಂಶಿ, ಅರ್ಬಾಸ್ ಖಾನ್, ಹೈಪರ್ ಆದಿ, ಮುರಳಿ ಶರ್ಮಾ, ಸಾಯಿ ದೀನಾ, ಬ್ರಹ್ಮಜಿ, ತುಳಸಿ, ದೇವಿಪ್ರಸಾದ್, ಅಯ್ಯಪ್ಪ ಶರ್ಮಾ, ಕಾಶಿ ವಿಶ್ವನಾಥ್, ಬಣ್ಣ ಹಚ್ಚಿದ್ದಾರೆ. ಚೋಟಾ ಕೆ ಪ್ರಸಾದ್ ಸಂಕಲನ, ದಾಶರಧಿ ಶಿವೇಂದ್ರ ಛಾಯಾಗ್ರಾಹಣ, ಹಾಗೂ ಪೃಥ್ವಿ, ರಾಮಕೃಷ್ಣ ಸಾಹಸ ನಿರ್ದೇಶನವಿದೆ.
https://twitter.com/telugufilmnagar/status/1815013280034730280