ತನ್ನ ಟೈಟಲ್ ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಜ್ಯೋತ್ಸ್ನಾ ಕೆ ರಾಜ್ ನಿರ್ದೇಶನದ ಸಾಂಕೇತ್ ಚಿತ್ರದ ಟ್ರೈಲರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತಾಗಿ ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ರಿವರ್ ಸ್ಟೀಮ್ ಸ್ಟುಡಿಯೋಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಚೈತ್ರ ಶೆಟ್ಟಿ ಸೇರಿದಂತೆ ವಿಕ್ಕಿ ರಾವ್, ಮೋಹನ್ ಶೇಣಿ, ರೂಪಶ್ರೀ ವೋರ್ಖಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರೀಕ್ಷಾ ರಾಣಿ, ರಜೀತ್ ಕದ್ರಿ, ಮೇಘನಾ ರಕ್ಷಿತಾ ಬಣ್ಣ ಹಚ್ಚಿದ್ದಾರೆ. ಜ್ಯೋತ್ಸ್ನಾ ಕೆ ರಾಜ್ ಅವರ ಸಂಕಲನ, ಪ್ರಕಾಶ್ ವಿ ರಾವ್ ಅವರ ಸಾಹಿತ್ಯವಿದೆ.