ನವೀನ್ ಜಿಎಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ನಾ ನಿನ್ನ ಬಿಡಲಾರೆ’ ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರದ ಟ್ರೈಲರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡುವುದರ ಕುರಿತು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಖ್ಯಾತ ನಿರ್ದೇಶಕರಾದ ಸಿಂಪಲ್ ಸುನಿ, ತರುಣ್ ಸುಧೀರ್ ಹಾಗೂ ಚೇತನ್ ಕುಮಾರ್ ಟ್ರೈಲರ್ ಲಾಂಚ್ ಮಾಡಲಿದ್ದಾರೆ.
ಈ ಚಿತ್ರದಲ್ಲಿ ಅಂಬಲಿ ಭಾರತಿ, ಪಂಚಿ, ಕೆ.ಎಸ್. ಶ್ರೀಧರ್, ಶ್ರೀನಿವಾಸ ಪ್ರಭು, ಹರಿಣಿ ಶ್ರೀಕಾಂತ್, ಸೀರುಂಡೆ ರಘು, ಮಹಾಂತೇಶ್, ಲಕ್ಷ್ಮಿ ಸಿದ್ದಯ್ಯ, ಮಂಜುಳಾ ರೆಡ್ಡಿ, ನಾಗರಾಜ್ ರಾವ್ ತೆರೆ ಹಂಚಿಕೊಂಡಿದ್ದು, ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಶ್ರೀಮತಿ ಭಾರತಿ ಬಾಲಿ ನಿರ್ಮಾಣ ಮಾಡಿದ್ದಾರೆ. ದೀಪಕ್ ಸಂಕಲನ, ವೀರೇಶ್ ಛಾಯಾಗ್ರಹಣ, ಹಾಗೂ ಡಿಫರೆಂಟ್ ಡ್ಯಾನಿ ಮತ್ತು ನರಸಿಂಹ ಅವರ ಸಾಹಸ ನಿರ್ದೇಶನವಿದೆ.