ಕಿರಣ್ ಸುಬ್ರಮಣಿ ನಟಿಸಿ ನಿರ್ದೇಶಿಸಿರುವ ಅಪ್ಪ ಹಾಗೂ ಮಗಳ ಬಾಂಧವ್ಯದ ಕುರಿತ ಸಿ ಚಿತ್ರ ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದ್ದು, ಇದರ ಟ್ರೈಲರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಚಿತ್ರದಲ್ಲಿ ಕಿರಣ್ ಸುಬ್ರಮಣಿ ಹಾಗೂ ಸಾನ್ವಿ ಸೇರಿದಂತೆ ಪ್ರಶಾಂತ್ ನಟನಾ, ಶ್ರೀಧರ್ ರಾಮ್, ಆರ್ಯ, ಮಜಾಭಾರತ್ ಪಾಟೀಲ್, ಮಧುಮಿತಾ, ಚೈತ್ರ, ನಿರ್ಮಲ ನಾದನ್, ತೆರೆ ಹಂಚಿಕೊಂಡಿದ್ದಾರೆ. ಎಬಿ ಮುರಳಿದರನ್ ಸಂಗೀತ ಸಂಯೋಜನೆ ನೀಡಿದ್ದು, ನವೀನ್ ಸುಂದರ್ ರಾವ್ ಸಂಕಲನ, ಹಾಗೂ ನವೀನ್ ಸೂರ್ಯ, ವೀರೇಶ್ ಕುಮಾರ್ ಅವರ ಛಾಯಾಗ್ರಹಣ, ಶಿವು ಎಸ್ ಸಾಹಸ ನಿರ್ದೇಶನ, ಹಾಗೂ ಗೀತಾ ಅವರ ನೃತ್ಯ ನಿರ್ದೇಶನವಿದೆ.
https://twitter.com/A2MusicSouth/status/1822202882759762197