ಆಶಿಕಾ ರಂಗನಾಥ್ ಗೆ ಸ್ವಾಗತ ಕೋರಿದ ‘ವಿಶ್ವಂಭರ’ ಚಿತ್ರತಂಡ

ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಆಶಿಕಾ ರಂಗನಾಥ್ ಇತ್ತೀಚಿಗೆ ಟಾಲಿವುಡ್ ಚಿತ್ರರಂಗದಲ್ಲೂ ಮಿಂಚುತ್ತಿದ್ದು, ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ ‘ವಿಶ್ವಂಭರ’ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಇಂದು ಆಶಿಕಾ ರಂಗನಾಥ್ ಅವರ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದೆ.

ಈ ಚಿತ್ರದಲ್ಲಿ  ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ತ್ರಿಷಾ, ಮೀನಾಕ್ಷಿ ಚೌದರಿ, ಹರ್ಷವರ್ಧನ್, ವೆನಿಲ್ಲಾ ಕಿಶೋರ್, ರಾವ್ ರಮೇಶ, ಕುನಾಲ್ ಕಪೂರ್, ಶುಭಲೇಖಾ ಸುಧಾಕರ್, ಮೃಣಾಲ್ ಠಾಕೂರ್, ಪ್ರವೀಣ್, ಮತ್ತು ಆಶಿಕಾ ರಂಗನಾಥ್  ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯು ವಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಪ್ರಮೋದ್ ವಿಕ್ರಮ್ ರೆಡ್ಡಿ ಹಾಗೂ ವಂಶಿ ಕೃಷ್ಣಾರೆಡ್ಡಿ ಬಂಡವಾಳ ಹೂಡಿದ್ದು, ಎಂಎಂ ಕಿರಾವಣಿ ಸಂಗೀತ ಸಂಯೋಜನೆ ನೀಡಿದ್ದಾರೆ. ಮುಂದಿನ ವರ್ಷ ಜನವರಿ 10ರಂದು ಈ ಸಿನಿಮಾ ವಿಶ್ವಾದ್ಯಂತ ತೆರೆ ಕಾಣಲಿದೆ.

https://twitter.com/telugufilmnagar/status/1793885950562767084

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read