ಅತಿಥಿ ಉಪನ್ಯಾಸಕರಿಗೂ ರಾಜ್ಯ ಸರ್ಕಾರ ‘ಆತ್ಮಹತ್ಯೆ ಭಾಗ್ಯ’ ವಿಸ್ತರಿಸಿದೆ : ಬಿಜೆಪಿ ವಾಗ್ಧಾಳಿ

ಬೆಂಗಳೂರು : ಅತಿಥಿ ಉಪನ್ಯಾಸಕರಿಗೂ ರಾಜ್ಯ ಸರ್ಕಾರ ಆತ್ಮಹತ್ಯೆ ಭಾಗ್ಯ ವಿಸ್ತರಿಸಿದೆ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ‘ರೈತರಿಗೆ, ಉದ್ಯಮಿಗಳಿಗೆ, ಕೂಲಿ ಕಾರ್ಮಿಕರಿಗೆ ಆತ್ಮಹತ್ಯೆ ಭಾಗ್ಯಗಳನ್ನು ಕರುಣಿಸಿದ್ದ ಸರ್ಕಾರ ಅತಿಥಿ ಉಪನ್ಯಾಸಕರಿಗೂ ವಿಸ್ತರಿಸಿದೆ . ಸರ್ಕಾರ, ಈಗ ಆ ಭಾಗ್ಯವನ್ನು ಅತಿಥಿ ಉಪನ್ಯಾಸಕರಿಗೂ ವಿಸ್ತರಿಸಿದೆ.

ಅತಿಥಿ ಉಪನ್ಯಾಸಕರ ಗೌರವಧನದಲ್ಲಿಯೂ ಕಲೆಕ್ಷನ್ ಮಾಡಿದ್ದ #ATMSarkara ಈಗ ಅತಿಥಿ ಉಪನ್ಯಾಸಕರಿಗೆ ಸರಿಯಾಗಿ ಸಂಬಳವನ್ನೂ ಸಹ ನೀಡುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಈ ನೀತಿಗೆ ಬೇಸತ್ತು ಸಿಂಧನೂರಿನಲ್ಲಿ ಅತಿಥಿ ಉಪನ್ಯಾಸಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತಿಥಿ ಉಪನ್ಯಾಸಕರನ್ನು ಜೀತದಾಳುಗಳ ರೀತಿ ನೋಡುತ್ತಿರುವ ಕಾಂಗ್ರೆಸ್ ಸರ್ಕಾರವೇ ಈ ಆತ್ಮಹತ್ಯೆಗೆ ನೇರ ಹೊಣೆ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

https://twitter.com/BJP4Karnataka/status/1718903780153172359

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read