ಎಸ್.ಎಸ್.ವಿಧಾ ನಿರ್ದೇಶನದ ಕೆಂಪೇಗೌಡ ಅಭಿನಯದ ‘ಕಟ್ಲೆ’ ಚಿತ್ರದ ಮೊದಲ ಹಾಡು ಇನ್ನೇನು ಶೀಘ್ರದಲ್ಲೇ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದ್ದು, ನಾಳೆ ಸಾಂಗ್ ಪ್ರೊಮೋ ರಿಲೀಸ್ ಮಾಡುವುದಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ”ಯಾರೋ ನಾ ಕಾಣೆ” ಎಂಬ ಈ ಹಾಡಿಗೆ ಟಿಪ್ಪು ಧ್ವನಿಯಾಗಿದ್ದು, ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರದಲ್ಲಿ ಕೆಂಪೇಗೌಡ ಅವರಿಗೆ ಜೋಡಿಯಾಗಿ ಅಮೃತ ಅಭಿನಯಿಸಿದ್ದು, ಹರೀಶ್ ರಾಜ್, ಹರ್ಷಿಕಾ ಪೊಣಚ್ಚ, ಟೆನ್ನಿಸ್ ಕೃಷ್ಣ, ಬಿರೇದಾರ್, ಉಮೇಶ್, ಯತಿ ರಾಜ್, ಶರಣ್ಯ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ನೀಡಿದ್ದಾರೆ. ಭರತ್ ಗೌಡ ತಮ್ಮ ಭರತ್ ಮೂವೀಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಚೆಲುವಮೂರ್ತಿ ಸಂಕಲನ, ವೇದಾರ್ಥ್ ಜಯಕುಮಾರ್ ಛಾಯಾಗ್ರಹಣವಿದೆ.