ಸುನಾಮಿ ಕಿಟ್ಟಿ ನಾಯಕನಾಗಿ ಅಭಿನಯಿಸಿರುವ ಆಕ್ಷನ್ ಲವ್ ಸ್ಟೋರಿ ಕಥಾಧಾರಿತ ‘ಕೋರ’ ಚಿತ್ರದ ”ಒಪ್ಪಿಕೊಂಡಳೋ” ಎಂಬ ಮೆಲೋಡಿ ಹಾಡು ನಾಳೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಒರಟ ಶ್ರೀ ನಿರ್ದೇಶಿಸಿರುವ ಈ ಚಿತ್ರವನ್ನು ರತ್ನಮ್ಮ ಮೂವೀಸ್ ಬ್ಯಾನರ್ ನಲ್ಲಿ ಪಿ ಮೂರ್ತಿ ನಿರ್ಮಾಣ ಮಾಡಿದ್ದು, ಸುನಾಮಿ ಕಿಟ್ಟಿ ಅವರಿಗೆ ಜೋಡಿಯಾಗಿ ಚರಿಷ್ಮಾ ಅಭಿನಯಿಸಿದ್ದಾರೆ. ಇನ್ನುಳಿದಂತೆ ಪಿ. ಮೂರ್ತಿ ಹಾಗೂ ಎಂ. ಕೆ ಮಠ ತೆರೆ ಹಂಚಿಕೊಂಡಿದ್ದಾರೆ. ಕೆ ಗಿರೀಶ್ ಕುಮಾರ್ ಸಂಕಲನ, ಲೋಕಿ ವೇಷಭೂಷಣ, ಸೆಲ್ವಂ ಛಾಯಾಗ್ರಾಹಣ, ಹಾಗೂ ಡಾ.ರವಿವರ್ಮ ಅವರ ಸಾಹಸ ನಿರ್ದೇಶನವಿದ್ದು, ಹೇಮಂತ್ ಕುಮಾರ್ ಸಂಗೀತ ಸಂಯೋಜನೆ ನೀಡಿದ್ದಾರೆ.