ಆಗಸ್ಟ್ 5 ರಂದು ರಿಲೀಸ್ ಆಗುತ್ತಿದೆ ‘ದೇವರ’ ಚಿತ್ರದ ಎರಡನೆಯ ಹಾಡು

ಕೊರಟಾಲ ಶಿವ ನಿರ್ದೇಶನದ ಜೂನಿಯರ್ ಎನ್ಟಿಆರ್ ಅಭಿನಯದ  ಬಹುನಿರೀಕ್ಷಿತ ‘ದೇವರ’ ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಜೂನಿಯರ್ ಎನ್ಟಿಆರ್ ಅವರನ್ನು ಮತ್ತೊಮ್ಮೆ ತೆರೆ ಮೇಲೆ ವೀಕ್ಷಿಸಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ದೇವರ ಸಿನಿಮಾದ ರೋಮ್ಯಾಂಟಿಕ್  ಹಾಡೊಂದನ್ನು ಇದೇ ಆಗಸ್ಟ್ ಐದರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಯುವ ಸುಧಾ ಆರ್ಟ್ಸ್ ಹಾಗೂ ಎನ್ಟಿಆರ್ ಆರ್ಟ್ಸ್ ಬ್ಯಾನರ್ ನಲ್ಲಿ ಈ ಚಿತ್ರಕ್ಕೆ ಸುಧಾಕರ ಮಿಕ್ಕಿಲಿನೇನಿ, ಕೊಸರಾಜು ಹರಿಕೃಷ್ಣ, ನಂದಮೂರಿ ಕಲ್ಯಾಣ್ ರಾಮ್, ಬಂಡವಾಳ ಹೂಡಿದ್ದಾರೆ. ಜೂನಿಯರ್ ಎನ್ಟಿಆರ್,  ಜಾನ್ವಿ ಕಪೂರ್ ಹಾಗೂ ಸೈಫ್ ಅಲಿ ಖಾನ್ ಸೇರಿದಂತೆ ಬಾಬಿ ಡಿಯೋಲ್, ಶ್ರುತಿ ಮರಾಠೆ, ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ, ಮುರಳಿ ಶರ್ಮಾ, ಅಜಯ್, ಅಭಿಮನ್ಯು ಸಿಂಗ್, ಬಣ್ಣ ಹಚ್ಚಿದ್ದಾರೆ. ರವಿಚಂದರ್ ಸಂಗೀತ ಸಂಯೋಜನೆ ನೀಡಿದ್ದು, ಶ್ರೀಕಾರ್ ಪ್ರಸಾದ್ ಅವರ ಸಂಕಲನವಿದೆ. ಸೆಪ್ಟೆಂಬರ್ 27ರಂದು ಈ ಸಿನಿಮಾ ವಿಶ್ವಾದ್ಯಂತ ತೆರೆ ಕಾಣಲಿದೆ

https://twitter.com/anirudhofficial/status/1819338647151239178

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read