20 ಸಾವಿರ ವರ್ಷಗಳಷ್ಟು ಹಳೆಯ ಪೆಂಡೆಂಟ್​ ಪತ್ತೆ ಹಚ್ಚಿದ ಸಂಶೋಧಕರು

ಪುರಾತತ್ತ್ವ ಶಾಸ್ತ್ರದ ನಿಧಿಯಾಗಿರುವ ಸೈಬೀರಿಯನ್ ಗುಹೆಯೊಳಗೆ, ಸರಿಸುಮಾರು 20 ಸಾವಿರ ವರ್ಷಗಳಷ್ಟು ಹಳೆಯದಾಗಿರುವ ಪೆಂಡೆಂಟ್​ ಸಂಶೋಧಿಸಲಾಗಿದೆ.
ಶಿಲಾಯುಗದ ಮಹಿಳೆಯರು ಬೇಟೆಗಾರರೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಸೈಬೀರಿಯಾದ ತಪ್ಪಲಿನಲ್ಲಿರುವ ಗುಹೆಯ ಸ್ಥಳದ ಪೂರ್ವ ಭಾಗದಲ್ಲಿ ವಾಸಿಸುತ್ತಿದ್ದರು.

ಇದು ರಷ್ಯಾದಲ್ಲಿ ಅಲ್ಟಾಯ್ ಪರ್ವತಗಳ ಸಮೀಪವಿದ್ದು, ಈ ಪೆಂಡೆಂಟ್​ ಆಗಿನ ಕಾಲದ್ದೇ ಎಂದು ನಂಬಲಾಗಿದೆ. ಈ ಪೆಂಡೆಂಟ್​ ಮೇಲಿರುವ ಬೆವರು ಮತ್ತು ಇತರ ದೈಹಿಕ ದ್ರವಗಳ ಆಧಾರದ ಮೇಲೆ ಡಿಎನ್‌ಎ ಪರೀಕ್ಷಿಸುವ ಕಾರ್ಯದಲ್ಲಿ ಸಂಶೋಧಕರು ತೊಡಗಿದ್ದಾರೆ.

ಪೆಂಡೆಂಟ್‌, ನೆಕ್ಲೇಸ್‌ಗಳು, ಬಳೆಗಳು, ಉಂಗುರಗಳು ಮತ್ತು ಮುಂತಾದವು – ಹಿಂದಿನ ನಡವಳಿಕೆ ಮತ್ತು ಸಂಸ್ಕೃತಿಯ ಒಳನೋಟವನ್ನು ನೀಡಬಹುದು, ಈ ಪೆಂಡೆಂಟ್​ 20 ಸಾವಿರ ವರ್ಷಗಳ ಹಿಂದಿನ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗಿದೆ ಎಂದಿದ್ದಾರೆ.

ಇದನ್ನು ಗುಹೆಯಿಂದ ತೆಗೆಯಲು ಸಾಕಷ್ಟು ಶ್ರಮ ವಹಿಸಲಾಗಿದೆ. ಸಂಶೋಧಕರು ಅದನ್ನು ಉತ್ಖನನ ಮಾಡುವಾಗ ಮತ್ತು ನಿರ್ವಹಿಸುವಾಗ ಕೈಗವಸುಗಳು ಮತ್ತು ಮುಖವಾಡಗಳನ್ನು ಬಳಸಿ ಅದಕ್ಕೆ ಹೊರ ಪರಿಸರದ ಮಾಲಿನ್ಯ ತಲುಪದಂತೆ ನೋಡಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read