ಗಂಡನ ಮರ್ಡರ್ ಮಿಸ್ಟರಿಗೆ ಹೆಂಡ್ತಿಯೇ ಮಾಸ್ಟರ್ ಮೈಂಡ್; ಖಾಕಿ ತನಿಖೆಯಲ್ಲಿ ಶಾಕಿಂಗ್ ಸಂಗತಿ ಬಯಲು

ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನ ಪತ್ನಿಯೇ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ನಡೆದಿದೆ. ಸೆಪ್ಟೆಂಬರ್ 16 ರಂದು ಬರ್ಬರವಾಗಿ ಹತ್ಯೆಯಾಗಿದ್ದ ಯುವಕನ ಕೊಲೆ ಪ್ರಕರಣವನ್ನ ಬೇಧಿಸಿದ ಪೊಲೀಸರಿಗೆ ಮೃತನ ಪತ್ನಿಯೇ ಕೊಲೆಗಾರ್ತಿ ಎಂಬುದು ಗೊತ್ತಾಗಿದೆ. ಮೃತನ ಪತ್ನಿ ತನ್ನ ಸೋದರಮಾವನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಳೆ.

ಕೊಲೆಗೆ ಮತ್ತೊಬ್ಬ ವ್ಯಕ್ತಿಯೂ ಬೆಂಬಲ ನೀಡಿದ್ದ ಎಂಬುದು ಗೊತ್ತಾಗಿದೆ. ಸದ್ಯ ಆರೋಪಿ ಪತ್ನಿ ಹಾಗೂ ಆಕೆಯ ಸೋದರಮಾವನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಲ್ಲಿ ಭಾಗಿಯಾದ ಮೂರನೇ ವ್ಯಕ್ತಿ ಯಾರು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ.

ತಿಸ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳವಾನ ಗ್ರಾಮದಲ್ಲಿ ಪ್ರಕರಣ ನಡೆದಿದೆ. ಸೆಪ್ಟೆಂಬರ್ 16 ರಂದು, ಮುಸ್ತಾಕಿಮ್ ಎಂಬ ವ್ಯಕ್ತಿಯನ್ನು ಅವರ ಪತ್ನಿ ಖುಷ್ಬೂ ಖಾತೂನ್ ಮತ್ತು ಆಕೆಯ ಸೋದರಮಾವ ಮೊಹಮ್ಮದ್ ಝಾಕಿರ್ ಕೊಲೆ ಮಾಡಿದ್ದರು. ಇದರಲ್ಲಿ ಮೂರನೇ ವ್ಯಕ್ತಿಯೂ ಭಾಗಿಯಾಗಿದ್ದ. ಮಾಹಿತಿ ಪ್ರಕಾರ ಮುಸ್ತಾಕಿಮ್ ಪತ್ನಿ ಖುಷ್ಬೂ ಜೊತೆ ಅವಳ ಸೋದರಮಾವ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಮುಸ್ತಾಕಿಮ್ ತನ್ನ ಮಲಗುವ ಕೋಣೆಯಲ್ಲಿ ಇಬ್ಬರನ್ನೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಿ ವಿರೋಧಿಸಿದ್ದ. ಈ ವಿಚಾರವಾಗಿ ಮೂವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಬಗ್ಗೆ ಎಲ್ಲರಿಗೂ ತಿಳಿಸಿ ವಿಚ್ಛೇದನವನ್ನೂ ಪಡೆಯುವುದಾಗಿ ಮುಸ್ತಾಕಿಮ್ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆತನ ಹೆಂಡ್ತಿ ಮುಸ್ತಾಕಿಮ್‌ನನ್ನು ಮುಗಿಸಲು ತನ್ನ ಸೋದರಮಾವನ ಜೊತೆ ಸೇರಿ ಯೋಜನೆ ರೂಪಿಸಿದಳು.

ಅವರ ಯೋಜನೆಯಲ್ಲಿ ಮೂರನೇ ವ್ಯಕ್ತಿಯನ್ನು ಸಹ ಸೇರಿಸಿಕೊಂಡರು. ನಂತರ ಸೆಪ್ಟೆಂಬರ್ 16 ರಂದು ಮೂವರೂ ಸೇರಿ ಮುಸ್ತಾಕಿಮ್ ನನ್ನು ಕೊಂದರು. ಮೂವರೂ ರಾತ್ರಿ ಮನೆಯಿಂದ ಹೊರಟು ಗದ್ದೆಗೆ ಹೋಗಿ ಮುಸ್ತಾಕಿಮ್ ಶವವನ್ನು ಎಸೆದಿದ್ದಾರೆ. ಮರುದಿನ ಶವವನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಅವರ ವಿಚಾರಣೆ ನಡೆಯುತ್ತಿದೆ.

ಮುಸ್ತಾಕಿಮ್ ಕೇರಳದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಮೂರು ತಿಂಗಳ ಹಿಂದೆ ಖುಷ್ಬು ಅವರನ್ನು ವಿವಾಹವಾಗಿದ್ದರು. ಮುಸ್ತಾಕಿಮ್ ತನ್ನ ಹೆಂಡತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ. ಗ್ರಾಮಸ್ಥರ ಪ್ರಕಾರ ಮುಸ್ತಾಕಿಮ್ ತುಂಬಾ ಸರಳ ಹುಡುಗ. ಆದರೆ ಆತನ ಪತ್ನಿ ತನ್ನ ಸೋದರಮಾವನ ಜೊತೆ ಸೇರಿ ಪತಿಯನ್ನು ಕೊಂದಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read