ತಮ್ಮ ಮಾಸ್ ಸಿನಿಮಾಗಳಂದಲೇ ಅಪಾರ ಅಭಿಮಾನ ಬಳಗವನ್ನು ಹೊಂದಿರುವ ಜೂನಿಯರ್ ಎನ್ಟಿಆರ್ ಅಭಿನಯದ ‘ದೇವರ’ ಇಂದು ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ, ಹಾಗೂ ಹಿಂದಿ ಭಾಷೆಯಲ್ಲಿ ತೆರೆ ಕಂಡಿದ್ದು, ಪ್ರೇಕ್ಷಕ ಪ್ರಭುಗಳು ಬಹುಪರಾಕ್ ಎಂದಿದ್ದಾರೆ. ಜೂನಿಯರ್ ಎನ್ಟಿಆರ್ ಎಂಟ್ರಿ ಬಂದ ಕೂಡಲೇ ಅವರ ಅಭಿಮಾನಿಗಳು ಥಿಯೇಟರ್ ನಲ್ಲಿ ಸಂಭ್ರಮಿಸಿದ್ದಾರೆ.
ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸೈಫ್ ಅಲಿ ಖಾನ್, ಹಾಗೂ ಜಾನ್ವಿ ಕಪೂರ್ ಸೇರಿದಂತೆ ಶ್ರುತಿ ಮರಾಠೆ, ಪ್ರಕಾಶ್ ರಾಜ್, ಶ್ರೀಕಾಂತ್, ನರೇನ್, ಕಲೈಯರಸನ್, ಮುರಳಿ ಶರ್ಮಾ, ಅಜಯ್, ಅಭಿಮನ್ಯು ಸಿಂಗ್, ತಾರಾಂಗಣದಲ್ಲಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ ನೀಡಿದ್ದು, ಎ. ಶ್ರೀಕರ್ ಪ್ರಸಾದ್ ಅವರ ಸಂಕಲನ, ಹಾಗೂ ಆರ್.ರತ್ನವೇಲು ಛಾಯಾಗ್ರಾಹಣವಿದೆ.
https://twitter.com/telugufilmnagar/status/1839565997512216913