
ಷೇರು ಮಾರುಕಟ್ಟೆ ಯಾವುದೇ ವ್ಯಕ್ತಿಯನ್ನು ಕ್ಷಣಾರ್ಧದಲ್ಲಿ ಕೋಟ್ಯಾಧಿಪತಿಯನ್ನಾಗಿಸಬಹುದು ಅಥವಾ ಇನ್ನಿಲ್ಲದಂತೆ ನೆಲಕಚ್ಚಿಸಬಹುದು. ಜಾಣ್ಮೆಯಿಂದ ಹೂಡಿಕೆ ಮಾಡಿದರೆ ಅಂಥವರಿಗೆ ಲಾಭ ಕಟ್ಟಿಟ್ಟ ಬುತ್ತಿ ಎಂಬ ಮಾತುಗಳಿವೆ. ಇದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ.
ಷೇರು ಮಾರುಕಟ್ಟೆಯಲ್ಲಿ ಅತಿ ದೊಡ್ಡ ಹೂಡಿಕೆದಾರ ಎಂಬ ಹೆಗ್ಗಳಿಕೆ ಹೊಂದಿರುವ ರಾಕೇಶ್ ಜುಂಜನ್ ವಾಲಾ ಅವರ ಪತ್ನಿ ರೇಖಾ ಜುಂಜನ್ ವಾಲಾ ಟಾಟಾ ಸಮೂಹಕ್ಕೆ ಸೇರಿದ ಟೈಟಾನ್ ಕಂಪನಿ ಶೇರುಗಳ ಮೇಲೆ ಹೂಡಿಕೆ ಮಾಡಿದ್ದು, ಅವರಿಗೆ ಒಂದೇ ತಿಂಗಳಲ್ಲಿ ದೊಡ್ಡ ಮೊತ್ತದ ಲಾಭ ತಂದುಕೊಟ್ಟಿದೆ.
ಏಪ್ರಿಲ್ – ಜೂನ್ 2023ರ ತ್ರೈಮಾಸಿಕ ಅವಧಿಯಲ್ಲಿ ರೇಖಾ ಜುಂಜನ್ ವಾಲಾ ಅವರು ಟೈಟಾನ್ ಕಂಪನಿಯ 4,75,95,970 ಷೇರುಗಳನ್ನು ಹೊಂದಿದ್ದು, ಕಳೆದ ಒಂದು ತಿಂಗಳಲ್ಲಿ ಇವುಗಳ ಬೆಲೆಯಲ್ಲಿ 291.80 ರೂಪಾಯಿ ಏರಿಕೆಯಾಗಿದೆ. ಹೀಗಾಗಿ ಈ ಅವಧಿಯಲ್ಲಿ ರೇಖಾ ಅವರ ಆಸ್ತಿ ಮೌಲ್ಯವೂ ಸಹ ಬರೋಬ್ಬರಿ 1,390 ಕೋಟಿ ರೂಪಾಯಿಗಳಷ್ಟು ಏರಿಕೆ ಕಂಡಿದೆ.

 
			 
		 
		 
		 
		 Loading ...
 Loading ... 
		 
		 
		