ಅಜೀರ್ಣಕ್ಕೆ ಪ್ರಮುಖ ಕಾರಣಗಳು ಇವು; ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ…!

ಅಜೀರ್ಣ ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ. ಇದು ಹೊಟ್ಟೆಯಲ್ಲಿ ಅಸ್ವಸ್ಥತೆ ಅಥವಾ ನೋವನ್ನು ಉಂಟುಮಾಡುತ್ತದೆ. ಹೊಟ್ಟೆ ಉಬ್ಬರಿಸುವಿಕೆ, ಮಲಬದ್ಧತೆ, ವಾಕರಿಕೆ ಮತ್ತು ಗ್ಯಾಸ್ಟ್ರಿಕ್‌ ಈ ಎಲ್ಲಾ ತೊಂದರೆಗಳು ಅಜೀರ್ಣದಿಂದಲೂ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಅಜೀರ್ಣಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಬೇಕು.

ಮಸಾಲೆಯುಕ್ತ ಆಹಾರ – ಹೆಚ್ಚು ಮೆಣಸಿನಕಾಯಿ ಮತ್ತು ಮಸಾಲೆಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಉರಿ ಮತ್ತು ಕಿರಿಕಿರಿ ಉಂಟಾಗುತ್ತದೆ. ಇದು ಕೆಲವರಲ್ಲಿ ಅಜೀರ್ಣಕ್ಕೆ ಕಾರಣವಾಗುತ್ತದೆ.

ಆಮ್ಲೀಯ ಆಹಾರಗಳುಕೆಲವರು ಅತಿಯಾದ ಆಮ್ಲೀಯ ಆಹಾರ ಅಥವಾ ಪಾನೀಯಗಳನ್ನು ಸೇವಿಸುತ್ತಾರೆ. ಇದು ಹೊಟ್ಟೆಯಲ್ಲಿ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಪರಿಣಾಮ ಅಜೀರ್ಣ ಉಂಟಾಗುತ್ತದೆ.

ಅತಿಯಾಗಿ ತಿನ್ನುವುದುಹಸಿದಿದ್ದಕ್ಕಿಂತ ಹೆಚ್ಚು ತಿನ್ನುವುದು ಮತ್ತು ಆಹಾರವನ್ನು ಸರಿಯಾಗಿ ಅಗಿಯದೇ ಬೇಗನೆ ನುಂಗುವುದು ಕೂಡ ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

ಕೆಫೀನ್ಭಾರತದಲ್ಲಿ ಟೀ-ಕಾಫಿ ಕುಡಿಯುವವರಿಗೇನೂ ಕೊರತೆಯಿಲ್ಲ. ಈ ಪಾನೀಯಗಳು ಅತಿಯಾದ ಕೆಫೀನ್ ಅನ್ನು ಒಳಗೊಂಡಿರುವುದರಿಂದ ಅಜೀರ್ಣ ಮತ್ತು ಮಲಬದ್ಧತೆಯನ್ನು ಉಂಟುಮಾಡುತ್ತವೆ.

ಮದ್ಯಆಲ್ಕೋಹಾಲ್ ದೇಹದ ಅನೇಕ ಭಾಗಗಳಿಗೆ ಹಾನಿಕಾರಕ. ಅದೇ ರೀತಿ ಹೊಟ್ಟೆಯ ಸಮಸ್ಯೆಗಳಿಗೂ ಇದು ಕಾರಣವಾಗುತ್ತದೆ. ಆಸಿಡ್ ಗಂಟಲಿಗೆ ಮತ್ತೆ ಬರುವಂತೆ ಮಾಡುತ್ತದೆ. ಪರಿಣಾಮ  ಅಜೀರ್ಣ ಮತ್ತು ಎದೆಯುರಿ ಉಂಟಾಗುತ್ತದೆ.

ಧೂಮಪಾನಸಿಗರೇಟ್, ಬೀಡಿ, ಹುಕ್ಕಾ ಅಥವಾ ಗಾಂಜಾ ಸೇದಿದರೆ ಅದು ಕೂಡ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಅಭ್ಯಾಸವನ್ನು ಆದಷ್ಟು ಬೇಗ ಬಿಡಬೇಕು.

ಔಷಧಿಗಳುಕೆಲವು ಔಷಧಿಗಳನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗುತ್ತವೆ. ಸ್ಟೀರಾಯ್ಡ್ ಅಲ್ಲದ ಉರಿಯೂತದ ಔಷಧಗಳು ಕೂಡ ಅಜೀರ್ಣಕ್ಕೆ ಕಾರಣವಾಗುತ್ತವೆ.

ಪೆಪ್ಟಿಕ್ ಹುಣ್ಣುಗಳುಹೊಟ್ಟೆಯ ಹುಣ್ಣುಗಳು ಅಥವಾ ಅಲ್ಸರ್‌ನಂತಹ ಸಮಸ್ಯೆಯಿಂದಲೂ ಅಜೀರ್ಣ ಉಂಟಾಗುತ್ತದೆ. ವಿಶೇಷವಾಗಿ ಊಟದ ಬಳಿಕ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಪಿತ್ತಕೋಶದಲ್ಲಿ ಲ್ಲುಪಿತ್ತಕೋಶದಲ್ಲಿ ಕಲ್ಲುಗಳ ಉಪಸ್ಥಿತಿಯಿಂದಾಗಿ, ಪಿತ್ತರಸ ನಾಳವು ನಿರ್ಬಂಧಿಸಲ್ಪಡುತ್ತದೆ, ಇದು ಅಜೀರ್ಣ ಮತ್ತು ನೋವನ್ನು ಉಂಟುಮಾಡುತ್ತದೆ.

ಒತ್ತಡ ಮತ್ತು ಆತಂಕಹಲವು ಬಾರಿ ಮಾನಸಿಕ ಸ್ಥಿತಿ ಸರಿಯಿಲ್ಲದಿದ್ದಾಗ ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಒತ್ತಡ ಮತ್ತು ಆತಂಕದ ಕಾರಣದಿಂದ ಅಜೀರ್ಣ ಉಂಟಾಗಬಹುದು. ಆದ್ದರಿಂದ ಯಾವಾಗಲೂ ಸಂತೋಷವಾಗಿರಲು ಪ್ರಯತ್ನಿಸಿ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read