ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ದೂದ್ ಪೇಡ ದಿಗಂತ್ ಅಭಿನಯದ ಪೌಡರ್ ಚಿತ್ರದ ಲಿರಿಕಲ್ ಹಾಡು ನಾಳೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ ಕುರಿತು ಚಿತ್ರ ತಂಡದಲ್ಲಿ ತಿಳಿಸಿದೆ ‘ಮಿಷನ್ ಗಮ ಗಮ’ ಎಂಬ ಈ ಹಾಡಿಗೆ ವಾಸುಕಿ ವೈಭವ್ ಹಾಗೂ mc ಬಿಜ್ಜು ಧ್ವನಿಯಾಗಿದ್ದಾರೆ.
ಈ ಚಿತ್ರದಲ್ಲಿ ದಿಗಂತ್ ಸೇರಿದಂತೆ ಧನ್ಯ ರಾಮ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರದಲ್ಲಿದ್ದು, ರಂಗಾಯಣ ರಘು, ಅನಿರುದ್ಧ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ಹುಲಿ ಕಾರ್ತಿಕ್, ಉಳಿದ ಪಾತ್ರವರ್ಗದಲ್ಲಿದ್ದಾರೆ. ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಮಣ್ಯಂ ಮತ್ತು ಅರುಣಾಭ್ ಕುಮಾರ್ ನಿರ್ಮಾಣ ಮಾಡಿದ್ದಾರೆ, ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದು, ಶ್ರೀ ಕೃಷ್ಣ ಮತ್ತು ಗೌತಮ್ ಪಲ್ಲಕ್ಕಿ ಸಂಕಲನ, ತ್ರಿಲೋಕ್ ತ್ರಿವಿಕ್ರಮ್ ಅವರ ಸಂಭಾಷಣೆ, ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ.
https://twitter.com/aanandaaudio/status/1808472862690353425