ಮನೆಗೆ ಹಾಕುವ ಬೀಗ ಬದಲಿಸುತ್ತೆ ನಿಮ್ಮ ʼಅದೃಷ್ಟʼ

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನ ಸಂತೋಷದಿಂದ ಕೂಡಿರಲಿ ಎಂದು ಬಯಸ್ತಾನೆ. ಸುಖ-ಶಾಂತಿಗಾಗಿ ಜೀವನ ಪೂರ್ತಿ ಕಷ್ಟ ಪಡ್ತಾನೆ. ಆದ್ರೆ ಎಲ್ಲರಿಗೂ ಸುಖ-ಶಾಂತಿ ಪ್ರಾಪ್ತವಾಗುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ವಾಸ್ತು ದೋಷವೂ ಇದ್ರಲ್ಲಿ ಒಂದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಸುಖ ಪ್ರಾಪ್ತಿಗೆ ಅನೇಕ ಉಪಾಯಗಳನ್ನು ಹೇಳಲಾಗಿದೆ.

ಶಾಸ್ತ್ರದ ಪ್ರಕಾರ, ನಿಮ್ಮ ಮನೆಗೆ ಹಾಕುವ ಬೀಗ ಕೂಡ ನಿಮ್ಮ ಅದೃಷ್ಟ ಬದಲಿಸುತ್ತದೆ. ಶುಕ್ರವಾರ ಉಕ್ಕು ಅಥವಾ ಕಬ್ಬಿಣದ ಬೀಗವನ್ನು ಖರೀದಿ ಮಾಡಬೇಕು. ಲಾಕ್ ಬಂದ್ ಆಗಿರುವ ಬೀಗವನ್ನು ಖರೀದಿ ಮಾಡಿ. ಪರೀಕ್ಷೆಗಾಗಿಯೂ ನೀವು ಲಾಕ್ ತೆಗೆಯಬೇಡಿ. ಅಂಗಡಿಯವನಿಗೂ ಲಾಕ್ ತೆಗೆಯಲು ಹೇಳಬೇಡಿ. ಹಾಗೆಯೇ ಮನೆಗೆ ತನ್ನಿ.

ಬೀಗವನ್ನು ಒಂದು ಡಬ್ಬಕ್ಕೆ ಹಾಕಿ. ಶುಕ್ರವಾರ ರಾತ್ರಿ ನೀವು ಮಲಗುವ ಕೋಣೆಯಲ್ಲಿ ನಿಮ್ಮ ಪಕ್ಕದಲ್ಲಿಟ್ಟು ಮಲಗಿ. ಶನಿವಾರ ಬೆಳಿಗ್ಗೆ ಎದ್ದು ಸ್ನಾನ ಮಾಡಿ, ದೇವಸ್ಥಾನದ ಬಳಿ ಬೀಗವನ್ನು ಇಟ್ಟು ಬನ್ನಿ. ನಂತ್ರ ಏನೂ ಮಾತನಾಡದೆ, ತಿರುಗಿ ನೋಡದೆ ಮನೆಗೆ ಬನ್ನಿ. ಇದ್ರಲ್ಲಿ ನಂಬಿಕೆಯಿಟ್ಟರೆ ನಿಮಗೆ ಯಶಸ್ಸು ನಿಶ್ಚಿತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read