ನಿಮ್ಮ ʼಅದೃಷ್ಟʼ ಬದಲಿಸುತ್ತೆ ‘V’ ಅಕ್ಷರ

ನಮ್ಮ ದೇಹದ ಪ್ರತಿಯೊಂದು ಅಂಗವೂ ನಮ್ಮ ಸ್ವಭಾವ, ಆರೋಗ್ಯ, ಭವಿಷ್ಯವನ್ನು ಹೇಳುತ್ತದೆ. ನಮ್ಮ ಕೈ ರೇಖೆಗಳು ಕರ್ಮಕ್ಕೆ ತಕ್ಕಂತೆ ಬದಲಾಗುತ್ತದೆ. ಇದು ನಮ್ಮ ಭೂತ, ಭವಿಷ್ಯ ಹಾಗೂ ವರ್ತಮಾನವನ್ನು ಹೇಳುತ್ತದೆ.

ಎಲ್ಲರ ಹಸ್ತ ರೇಖೆ ಒಂದೇ ರೀತಿ ಇರುವುದಿಲ್ಲ. ಹಸ್ತದಲ್ಲಿ ಇರುವ ರೇಖೆಗಳು ಅಕ್ಷರಗಳನ್ನು ಹೋಲುತ್ತದೆ. ಈ ಅಕ್ಷರಗಳು ವ್ಯಕ್ತಿಯ ಸ್ವಭಾವವನ್ನು ಹೇಳುತ್ತವೆ. ನಿಮ್ಮ ಹಸ್ತದಲ್ಲಿ ವಿ ಅಕ್ಷರವಿದ್ರೆ ಅದ್ರ ಅರ್ಧವೇನು ಎಂಬುದನ್ನು ತಿಳಿದುಕೊಳ್ಳಿ.

ನಿಮ್ಮ ಹಸ್ತದಲ್ಲಿ ‘ವಿ’ ಅಕ್ಷರವಿದ್ರೆ ನಿಮ್ಮ ಜೀವನದಲ್ಲಿ ಪ್ರಗತಿ ಸಾಧಿಸುತ್ತೀರಿ ಎಂದರ್ಥ. ಅದೃಷ್ಟ ನಿಮ್ಮ ಜೊತೆಗಿರುತ್ತದೆ. ನೀವು ಯಾವುದೇ ಕೆಲಸ ಮಾಡಿದ್ರೂ ಯಶಸ್ಸು ನಿಮಗೆ ಲಭಿಸುತ್ತದೆ.

ನಿಮ್ಮ ಭವಿಷ್ಯ ನಿಮ್ಮ ಕೈನಲ್ಲಿದೆ ಎಂಬುದು ಇದ್ರ ಸಂಕೇತ. ನೀವು ಕಷ್ಟಪಟ್ರೆ ಯಶಸ್ಸು ಕಟ್ಟಿಟ್ಟ ಬುತ್ತಿ. ನಿಮ್ಮ ದಾರಿಯನ್ನು ಸ್ವತಃ ನೀವೇ ನಿರ್ಧರಿಸಿಕೊಳ್ಳಬೇಕು.

ನಿಮ್ಮ ಕೈನಲ್ಲಿ ವಿ ಅಕ್ಷರವಿದ್ರೆ ನೀವು ಯಾವುದೇ ವ್ಯಾಪಾರ ಮಾಡಿ, ಅದ್ರಲ್ಲಿ ಪ್ರಗತಿ, ಯಶಸ್ಸು ಲಭಿಸುತ್ತದೆ ಎಂದರ್ಥ.

ಜೀವನದಲ್ಲಿ ಎಂದೂ ಧನ, ಸಂಪತ್ತಿನ ಕೊರತೆಯಾಗುವುದಿಲ್ಲ. ಎಲ್ಲ ಕಡೆಯಿಂದ ಸಂಪತ್ತು ಬರಲಿದ್ದು, ನಿಮ್ಮ ಜೀವನ ಸುಖಕರವಾಗಿರಲಿದೆ.

ಹಸ್ತದಲ್ಲಿ ವಿ ಅಕ್ಷರವಿದ್ರೆ ದೇವಾನುದೇವತೆಗಳ ಕೃಪೆ ನಿಮ್ಮ ಮೇಲಿರುತ್ತದೆ ಎಂದರ್ಥ. ಯಾವುದೇ ಕೆಲಸ ಮಾಡುವ ಮೊದಲು ನಿಮ್ಮಿಷ್ಟದ ದೇವರನ್ನು ಪ್ರಾರ್ಥಿಸಿ ಕೆಲಸ ಶುರು ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read