ʼದಿ ಕೇರಳ ಸ್ಟೋರಿʼ ಬಳಿಕ ಮಾವೋವಾದಿಗಳ ಹೋರಾಟ ಕುರಿತು ಚಿತ್ರ ನಿರ್ದೇಶಿಸಲಿದ್ದಾರೆ ಸುದೀಪ್ತೋ ಸೇನ್

ಸುದೀಪ್ತೋ ಸೇನ್ ನಿರ್ದೇಶನದ ಕೇರಳ ಸ್ಟೋರಿ ಬಿಡುಗಡೆಯಾದಾಗಿನಿಂದ ಹೆಸರು ಮಾಡಿದ್ದು ಗಲ್ಲಾಪೆಟ್ಟಿಗೆಯಲ್ಲೂ ಸದ್ದು ಮಾಡಿದೆ. ಈ ಚಿತ್ರದ ಸಕ್ಸಸ್ ನಲ್ಲಿರುವ ನಿರ್ದೇಶಕರು ಮುಂದೆ 50 ವರ್ಷಗಳ ಮಾವೋವಾದಿಗಳ ಚಳುವಳಿಯ ಕುರಿತು ಸಿನಿಮಾ ಮಾಡೋದಾಗಿ ಘೋಷಿಸಿದ್ದಾರೆ.

“ನನ್ನ ಮುಂದಿನ ಚಿತ್ರವು ಭಾರತದಲ್ಲಿ ಸುಮಾರು ಐವತ್ತು ವರ್ಷಗಳ ಮಾವೋವಾದಿ ಚಳುವಳಿಯಾಗಿದೆ. ನಾನು ಈ ಚಿತ್ರವನ್ನು ನನ್ನ ದಿ ಕೇರಳ ಸ್ಟೋರಿ ನಿರ್ಮಾಪಕ ವಿಪುಲ್ ಶಾ ಜಿ ಅವರಿಗೆ ನಿರ್ದೇಶಿಸಲಿದ್ದೇನೆ. ಕೇರಳ ಸ್ಟೋರಿಯಲ್ಲಿ ಅವರೊಂದಿಗೆ ಕೆಲಸ ಮಾಡುವುದು ಅತ್ಯಂತ ತೃಪ್ತಿಕರ ಅನುಭವವಾಗಿದೆ.” ಎಂದು ಸುದೀಪ್ತೋ ಸೇನ್ ಹೇಳಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ವಿವಾದಾತ್ಮಕ ವಿಷಯದ ಕಾರಣದಿಂದ ದಿ ಕೇರಳ ಸ್ಟೋರಿ ಚಿತ್ರವು ಹೆಚ್ಚಾಗಿ ಸದ್ದು ಮಾಡಿತು. ಆರಂಭದಲ್ಲಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಪ್ರದರ್ಶನಕ್ಕೆ ಭಾರೀ ವಿರೋಧದ ನಡುವೆಯೂ ಹಣ ಗಳಿಕೆಯಲ್ಲೂ ಹೆಸರು ಮಾಡಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read