ChaiGPT ಹೆಸರಿನ ಈ ವಿಶಿಷ್ಟ ಟೀ ಸ್ಟಾಲ್‌ ಫೋಟೋ ವೈರಲ್….!

ಕೃತಕ ಬುದ್ಧಿಮತ್ತೆ ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನದ ಹೊಸ ಯುಗಕ್ಕೆ ನಾಂದಿ ಹಾಡಿದೆ. ಪ್ರತಿದಿನ ನೆಟ್ಟಿಗರು ಹೊಸ ಹೊಸ ವಿಚಾರಗಳನ್ನು ಕಲಿಯಲು ಪ್ರಯತ್ನಿಸುತ್ತಾರೆ. ಇದೀಗ ChaiGPT ಹೆಸರಿನ ವಿಶಿಷ್ಟ ಟೀ ಸ್ಟಾಲ್‌ವೊಂದು ಅಂತರ್ಜಾಲದಲ್ಲಿ ಗಮನಸೆಳೆದಿದ್ದು, ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗಿದೆ.

ಹೌದು, ನೀವು ಕೆಫೆ ಕಾಫಿ ಡೇ, ಸ್ಟಾರ್ ಬಕ್ಸ್ ಕಾಫಿ ಎಂಬ ಬ್ರ್ಯಾಂಡ್ ಗಳ ಹೆಸರು ಕೇಳಿರಬಹುದು. ChaiGPT ಎಂಬ ಹೆಸರನ್ನು ಕೇಳಿದ್ದೀರಾ? ಇದು ಒಂದು ಚಹಾ ಅಂಗಡಿಯ ಹೆಸರು. ಇದರ ಫೋಟೋವನ್ನು ಸ್ವಾತಿ ಎಂಬುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ChaiGPT ಫೋಟೋ ನೋಡಿದ ತಕ್ಷಣವೇ ಎಲ್ಲರನ್ನು ರಂಜಿಸಿದೆ.

ಸಿಲಿಕಾನ್ ವ್ಯಾಲಿ, ನಮ್ಮಲ್ಲಿ ಅತ್ಯುತ್ತಮ ಸ್ಟಾರ್ಟ್-ಅಪ್ ಐಡಿಯಾಗಳಿವೆ. ಇಲ್ಲಿನ ಚಹಾವನ್ನು ಆನಂದಿಸಿ ಎಂದು ಪೋಸ್ಟ್ ಹಂಚಿಕೊಳ್ಳುತ್ತಾ ಶೀರ್ಷಿಕೆ ನೀಡಲಾಗಿದೆ. ಈ ಪೋಸ್ಟ್ ಸುಮಾರು 18 ಸಾವಿರ ವೀಕ್ಷಣೆಗಳನ್ನು ಮತ್ತು ಅನೇಕ ಕಾಮೆಂಟ್‌ಗಳನ್ನು ಗಳಿಸಿದೆ. ನೆಟ್ಟಿಗರು ಇಂತಹ ವಿಶಿಷ್ಟ ಹೆಸರಿನ ಅಂಗಡಿಯಲ್ಲಿ ಚಹಾ ಸವಿಯಲು ಉತ್ಸುಕರಾಗಿದ್ದಾರೆ. ಅಲ್ಲದೆ ಬೀದಿಬದಿ ವ್ಯಾಪಾರಿಗಳ ಕಲ್ಪನೆಗೆ ಸಲಾಂ ಎಂದಿದ್ದಾರೆ.

https://twitter.com/swatic12/status/1658800721326661635?ref_src=twsrc%5Etfw%7Ctwcamp%5Etweetembed

https://twitter.com/Amanprabhat9/status/1658802566749372416?ref_src=twsrc%5Etfw%7Ctwcamp%5Etweetembed%7Ctwterm%5E1658802566749372416%7Ctwgr%5E9d56e5ef34b6233b6d8fa9cd3a7a846d50baeb11%7Ctwcon%5Es1_&ref_url=https%3A%2F%2Fd-16355985862115565710.ampproject.net%2F2305051745000%2Fframe.html

https://twitter.com/Herpolarstar/status/1658801763863117825?ref_src=twsrc%5Etfw%7Ctwcamp%5Etweetembed%7Ctwterm%5E1658801763863117825%7Ctwgr%5E51cf76d3c41162b4f8bfa178187677b44628c123%7Ctwcon%5Es1_&ref_url=https%3A%2F%2Fd-16355985862115565710.ampproject.net%2F2305051745000%2Fframe.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read