ಆರೋಗ್ಯಕ್ಕೆ ಮಾರಕವಾಗಬಹುದು ಪ್ರತಿದಿನ ಬೆಳಗ್ಗೆ ಚಹಾ ಅಥವಾ ಹಾಲಿನೊಂದಿಗೆ ಬ್ರೆಡ್ ಸೇವಿಸುವ ಅಭ್ಯಾಸ…..!

ಬೆಳಗಿನ ಉಪಾಹಾರ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ತೆರನಾಗಿರುತ್ತದೆ. ಸಾಮಾನ್ಯವಾಗಿ ನಗರಗಳಲ್ಲಿ ವಾಸಿಸುವ ಹೆಚ್ಚಿನ ಜನರು ಪ್ರತಿದಿನ ಬೆಳಗ್ಗೆ ಚಹಾದೊಂದಿಗೆ ಬ್ರೆಡ್ ಅನ್ನು ಸೇವಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಪ್ರತಿದಿನ ಬ್ರೆಡ್ ತಿನ್ನುವುದು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಉಪಾಹಾರಕ್ಕಾಗಿ ಪ್ರತಿದಿನ ಚಹಾ ಅಥವಾ ಹಾಲಿನೊಂದಿಗೆ ಬ್ರೆಡ್ ತಿನ್ನುವ ಅಭ್ಯಾಸ ಆರೋಗ್ಯಕ್ಕೆ ಮಾರಕವಾಗಬಹುದು. ಪ್ರತಿದಿನ ಬ್ರೆಡ್ ಸೇವಿಸಿದರೆ ಅದು ವಾಯು, ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಬ್ರೆಡ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಏರಬಹುದು ಮತ್ತು ನಂತರ ಕುಸಿಯಬಹುದು. ಇದರಿಂದಾಗಿ ಯಾವಾಗಲೂ ದಣಿವಾಗುತ್ತದೆ. ಪ್ರತಿದಿನ ಬ್ರೆಡ್ ಸೇವನೆಯಿಂದ ತೂಕ ಬೇಗನೆ ಹೆಚ್ಚಾಗುತ್ತದೆ. ಏಕೆಂದರೆ ಬ್ರೆಡ್ ಮತ್ತು ಹಾಲು ಇವೆರಡೂ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ.

ಆರೋಗ್ಯವಾಗಿರಲು ಬಯಸಿದರೆ ಬೆಳಗಿನ ಉಪಹಾರವನ್ನು ಪ್ರೋಟೀನ್‌ನೊಂದಿಗೆ ಆರಂಭಿಸಿ. ಆರೋಗ್ಯಕರ ತಿನಿಸುಗಳನ್ನು, ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಿ. ಅಷ್ಟೇ ಅಲ್ಲ ಸಕ್ಕರೆ ಬೆರೆಸದ ಹಾಲು ಕುಡಿಯಬಹುದು. ಸ್ವೀಟ್‌ ಬ್ರೆಡ್‌ ಬದಲು ಬ್ರೌನ್‌ ಬ್ರೆಡ್‌ ಅಥವಾ ಧಾನ್ಯಗಳಿಂದ ಮಾಡಿದ ಬ್ರೆಡ್ ಕೂಡ ಸೇವಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read