ಮದುವೆ ನಡೆಯುವಾಗಲೇ ಯುವತಿ ಎಂಟ್ರಿ; ವರನ ಅಸಲಿಯತ್ತು ಕೇಳಿ ಕಂಗಾಲಾದ ವಧು | Video

ಮದುವೆ ನಡೆಯುತ್ತಿದ್ದಾಗಲೇ ಯುವತಿಯೊಬ್ಬಳು ಎಂಟ್ರಿ ಕೊಟ್ಟಿದ್ದು, ವರನ ವಿರುದ್ಧ ಗಂಭೀರ ಆರೋಪ ಮಾಡಿ ಮದುವೆ ನಿಲ್ಲಿಸುವಂತೆ ಮಾಡಿದ್ದಾಳೆ. ವಾಸ್ತವವಾಗಿ, ಯುವತಿ ಈಗ ಮದುವೆಯಾಗುತ್ತಿರುವ ವರ ತನ್ನ ಪ್ರೇಮಿ ಎಂದು ಹೇಳಿದ್ದು ಮತ್ತು ಅವನ ವಿರುದ್ಧ ಸೂಕ್ತ ಸಾಕ್ಷ್ಯವನ್ನು ಸಹ ತೋರಿಸಿದ್ದಾರೆ. ಈ ಘಟನೆಯ ನಂತರ ವಧುವಿನ ಮನೆಯವರು ವರ ಮತ್ತು ಆತನ ತಂದೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಉತ್ತರ ಪ್ರದೇಶದ ಸಹಾರಾನ್ಪುರ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಿಹಾರಿಗಢ ಪೊಲೀಸ್ ಠಾಣೆಯ ಶೇರ್ಪುರ್ ನಿವಾಸಿ ದಿಲ್ಬಹಾರ್ ಜೊತೆ ಗಗಲ್ಹೆಡಿಯ ಹುಡುಗಿ‌ ಜೊತೆ ಮದುವೆ ನಿಶ್ಚಯವಾಗಿತ್ತು. ಮಂಗಳವಾರ ಮದುವೆ ಮೆರವಣಿಗೆ ಬಂದ ತಕ್ಷಣ ಕೇರಳದ ಅಣ್ಣಾಕುಲಂ ಜಿಲ್ಲೆಯ ಯುವತಿ ಮದುವೆ ಸಮಾರಂಭಕ್ಕೆ ನುಗ್ಗಿ ಸಂಚಲನ ಮೂಡಿಸಿದ್ದಾರೆ. ದಿಲ್ಬಹರ್, ಕೇರಳದಲ್ಲಿ ಪೀಠೋಪಕರಣ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಏಳು ವರ್ಷಗಳಿಂದ ಇಬ್ಬರೂ ಸಂಬಂಧದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.

ದಿಲ್ಬಹರ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ, ಆದರೆ ಈಗ ಅವನು ನಿರಾಕರಿಸಿದ್ದಾನೆ ಎಂದು ಯುವತಿ ಹೇಳಿದರಲ್ಲದೇ ಮದುವೆ ಆಗಮಿಸಿದ್ದವರಿಗೆ ದಿಲ್ಬಹಾರ್ ಜೊತೆಗಿನ ಸಂಬಂಧದ ಚಿತ್ರಗಳನ್ನು ಸಹ ತೋರಿಸಿದ್ದಾರೆ. ಅಲ್ಲದೇ ತನ್ನನ್ನು ಮದುವೆಯಾಗಲು ನಿರಾಕರಿಸಿದ ದಿಲ್ಬಹರ್ ವಿರುದ್ಧ ನವೆಂಬರ್ 30 ರಂದು ಕೇರಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಯುವತಿ ತಿಳಿಸಿದ್ದಾಳೆ.

ಘಟನೆ ಬಳಿಕ ವಧುವಿನ ಮನೆಯವರು ತಕ್ಷಣ ಕ್ರಮ ಕೈಗೊಂಡು ವರ ಹಾಗೂ ಆತನ ತಂದೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಜೊತೆಗೆ ಮದುವೆಯನ್ನು ರದ್ದುಗೊಳಿಸಲಾಗಿದೆ. ಪೊಲೀಸರು ದಿಲ್ಬಹಾರ್ ಮತ್ತು ಆತನ ತಂದೆಯ ವಿಚಾರಣೆ ಆರಂಭಿಸಿದ್ದಾರೆ. ಅದೇ ಸಮಯದಲ್ಲಿ, ಯುವತಿ ಪೊಲೀಸ್ ಠಾಣೆಯಲ್ಲಿ ಕುಳಿತು ತನ್ನ ಪ್ರಿಯಕರನೊಂದಿಗೆ ಹೋಗುವ ತನ್ನ ಬೇಡಿಕೆಗೆ ಅಚಲವಾಗಿಯೇ ಇದ್ದಳು. ವಿಷಯ ಗಂಭೀರವಾಗಿದ್ದು, ತಡರಾತ್ರಿಯವರೆಗೂ ಉಭಯ ಪಕ್ಷಗಳ ನಡುವೆ ಇತ್ಯರ್ಥಕ್ಕೆ ಪ್ರಯತ್ನ ಮುಂದುವರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಅಧಿಕೃತ ದೂರು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read