‘ವಸಂತ ಕಾಲದ ಹೂಗಳು’ ಚಿತ್ರದ ಮೊದಲ ಹಾಡು ಇಂದು ರಿಲೀಸ್

ಸಚಿನ್ ಶೆಟ್ಟಿ ನಿರ್ದೇಶನದ ‘ವಸಂತ ಕಾಲದ ಹೂಗಳು’ ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ.

‘ನೆನಪಿನ ಬುತ್ತಿ’ ಎಂಬ ಈ ಹಾಡಿಗೆ ಪ್ರಥಮ್ ಭಟ್ ಧ್ವನಿಯಾಗಿದ್ದು, ಭರತ್ ಜನಾರ್ಧನ್ ಸಂಗೀತ ಸಂಯೋಜನೆ ನೀಡಿದ್ದಾರೆ. ನಿರ್ದೇಶಕ ಸಚಿನ್ ಶೆಟ್ಟಿ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ಯದುವಂಶಿ ಫಿಲಂ ಬ್ಯಾನರ್ ನಲ್ಲಿ ಅಶೋಕ್ ರಾಥೋಡ್, ಸಿದ್ದು ನಿರ್ಮಾಣ ಮಾಡಿದ್ದು, ಶಿವ ಶಂಕರ್ ಛಾಯಾಗ್ರಹಣವಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಹೊಸಬರ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ನಿರೀಕ್ಷೆಯಲ್ಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read