ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಅಭಿನಯದ ಬಹು ನಿರೀಕ್ಷಿತ ‘ಗೇಮ್ ಚೇಂಜರ್’ ಚಿತ್ರದ ”ಜರಗಂಡಿ” ಎಂಬ ಮೊದಲ ಗೀತೆ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದೆ.
ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್ ಐಎಎಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿಯಾರ ಅಡ್ವಾಣಿ, ಸೇರಿದಂತೆ ಅಂಜಲಿ, ಜಯರಾಮ್, ಸುನಿಲ್, ಶ್ರೀಕಾಂತ್, ನವೀನ್ ಚಂದ್ರ, ಅಜಯ್ ರಾಜ್, ವೈಭವ್ ರೆಡ್ಡಿ, ತಾರಾ ಬಳಗದಲ್ಲಿದ್ದಾರೆ. ತಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದು, ಶಮೀರ್ ಮಹಮ್ಮದ್ ಸಂಕಲನವಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ದಿಲ್ ರಾಜು ಮತ್ತು ಸಿರೀಶ್ ಬಂಡವಾಳ ಹೂಡಿದ್ದಾರೆ.
https://twitter.com/pudiharicharan/status/1772500634937311387?ref_src=twsrc%5Egoogle%7Ctwcamp%5Eserp%7Ctwgr%5Etweet