‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೊದಲ ಹಾಡು ರಿಲೀಸ್

ಶ್ರೀನಿವಾಸ್ ರಾಜು ರಚಿಸಿ ನಿರ್ದೇಶಿಸಿರುವ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೊದಲ ಗೀತೆಯನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘my marriage is fixed’ ಎಂಬ ಈ ಹಾಡಿಗೆ ಚಂದನ್ ಶೆಟ್ಟಿ ಧ್ವನಿಯಾಗಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.

ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮಾಳವಿಕಾ ನಾಯರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಶರಣ್ಯ ಶೆಟ್ಟಿ ಸೇರಿದಂತೆ ಸಾಧುಕೋಕಿಲ, ಶ್ರೀನಿವಾಸ್ ಮೂರ್ತಿ, ರಂಗಾಯಣ ರಘು, ಭಾವನ, ಅಂಬುಜ, ಗಿರಿ ಶಿವಣ್ಣ, ಶಶಿಕುಮಾರ್, ಶ್ರುತಿ, ಅಶೋಕ್, ಮತ್ತು  ರಾಮಕೃಷ್ಣ ಉಳಿದ ಪಾತ್ರದಲ್ಲಿದ್ದಾರೆ.

ತ್ರಿಶೂಲ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಪ್ರಶಾಂತ್ ಜಿ ರುದ್ರಪ್ಪ ಬಂಡವಾಳ ಹೂಡಿದ್ದಾರೆ. ವಿಜಯ್ ಈಶ್ವರ್ ಸಂಭಾಷಣೆ, ವೆಂಕಟ್ ಪ್ರಸಾದ್ ಛಾಯಾಗ್ರಹಣ, ಕೆಎಮ್ ಪ್ರಕಾಶ್ ಸಂಕಲನವಿದೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read