ತಮಿಳುನಾಡು ಪ್ರೀಮಿಯರ್ ಲೀಗ್ ಇನ್ನೇನು ಅಂತಿಮ ಘಟ್ಟ ತಲುಪಿದೆ. ನಾಳೆಯಿಂದ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿದ್ದು, ಮೊದಲ ಕ್ವಾಲಿಫೈಯರ್ ನಲ್ಲಿ ಬಾಬಾ ಇಂದ್ರಜಿತ್ ನಾಯಕತ್ವದ ಲೈಕಾ ಕೋವೈ ಕಿಂಗ್ಸ್ ಹಾಗೂ ಆರ್ ಪ್ರಸನ್ನ ನೇತೃತ್ವದ ಐಡ್ರೀಮ್ ತಿರುಪ್ಪೂರ್ ತಮಿಜಾನ್ಸ್ ಮುಖಾಮುಖಿಯಾಗುತ್ತಿವೆ.
ದಿಂಡಿಗಲ್ ನ NPR ಕಾಲೇಜು ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಈ ರೋಮಾಂಚನಕಾರಿ ಪಂದ್ಯವನ್ನು ನೋಡಲು ತಮಿಳುನಾಡು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದಾದ ಬಳಿಕ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಜುಲೈ 31ಕ್ಕೆ ಮತ್ತೊಂದು ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಆಗಸ್ಟ್ ನಾಲ್ಕರಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯವಿರಲಿದೆ.