ಇಂಥಾ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದರು ಖ್ಯಾತ ಪಾಪ್‌ ಗಾಯಕ ಜಸ್ಟಿನ್ ಬೀಬರ್‌….!

 

ವಿಶ್ವ ಪ್ರಸಿದ್ಧ ಪಾಪ್ ಗಾಯಕ ಜಸ್ಟಿನ್ ಬೀಬರ್‌ ಸದ್ಯ ಭಾರತ ಪ್ರವಾಸದಲ್ಲಿದ್ದಾರೆ. ಮುಖೇಶ್ ಅಂಬಾನಿ ಪುತ್ರನ ಅದ್ಧೂರಿ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಾಪ್‌ ಗಾಯಕ ಭಾರತಕ್ಕೆ ಬಂದಿದ್ದಾರೆ. ಜಸ್ಟಿನ್‌ ಬೀಬರ್‌ ಹಾಡುಗಳು ಬಹಳ ಜನಪ್ರಿಯ. ಯುವಕ-ಯುವತಿಯರಲ್ಲಂತೂ ಪಾಪ್‌ ಗಾಯಕನ ಬಗ್ಗೆ ಸಾಕಷ್ಟು ಕ್ರೇಝ್‌ ಇದೆ. ಈ ಹಿಂದೆ ಜಸ್ಟಿನ್‌ ಬೀಬರ್‌ ತೀವ್ರ ಅನಾರೋಗ್ಯಕ್ಕೊಳಗಾಗಿದ್ದರು. ಅವರ ಮುಖದ ಅರ್ಧ ಭಾಗ ನಿಷ್ಕ್ರಿಯವಾಗಿತ್ತು. ಅಷ್ಟಕ್ಕೂ ಇದ್ಯಾವ ಕಾಯಿಲೆ? ಅದರ ಲಕ್ಷಣಗಳೇನು ಎಂಬುದನ್ನು ತಿಳಿಯೋಣ.

ಜಸ್ಟೀನ್‌ ಬೀಬರ್‌ ಅವರನ್ನ ಕಾಡುತ್ತಿದ್ದ ರೋಗದ ಹೆಸರು ರಾಮ್ಸೆ ಹಂಟ್ ಸಿಂಡ್ರೋಮ್. ಈ ಕಾಯಿಲೆಗೆ ತುತ್ತಾದರೆ ಮುಖವು ಪಾರ್ಶ್ವವಾಯುವಿಗೆ ಒಳಗಾಗಲು ಪ್ರಾರಂಭಿಸುತ್ತದೆ.

ರಾಮ್ಸೆ ಹಂಟ್ ಸಿಂಡ್ರೋಮ್‌ನ ಲಕ್ಷಣಗಳು

ಈ ಕಾಯಿಲೆಗೆ ತುತ್ತಾದರೆ ಮುಖವು ಪಾರ್ಶ್ವವಾಯುವಿಗೆ ಒಳಗಾಗುತ್ತದೆ. ಕಣ್ಣುಗಳನ್ನು ಮಿಟುಕಿಸಲು ಸಹ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಕಾರ್ನಿಯಲ್ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ. ಪಾರ್ಶ್ವವಾಯು, ಕುತ್ತಿಗೆ ನೋವು, ಶ್ರವಣ ನಷ್ಟ, ಕಿವಿ ನೋವು ಹೀಗೆ ಅನೇಕ ರೀತಿಯ ರೋಗಲಕ್ಷಣಗಳು ಕಂಡುಬರುತ್ತವೆ. ಕೆಲವೊಮ್ಮೆ ತಾನು ಕುಳಿತಿರುವ ಸ್ಥಳವು ತಿರುಗಲು ಪ್ರಾರಂಭಿಸಿದೆ ಎಂದು ಭಾಸವಾಗುತ್ತದೆ. ಮಾತನಾಡುವಾಗ ಎಡವಿ ಬೀಳುವುದು ಕೂಡ ಈ ರೋಗದ ಲಕ್ಷಣ.

ಈ ರೋಗಲಕ್ಷಣದ ಕಾರಣಗಳು ಹೆಚ್ಚುತ್ತಿರುವ ವಯಸ್ಸು, ಅನಾರೋಗ್ಯ ಮತ್ತು ಒತ್ತಡವನ್ನು ಒಳಗೊಂಡಿರುತ್ತವೆ. ಚಿಕನ್‌ಫಾಕ್ಸ್‌ ವೈರಸ್, ವರಿಸೆಲ್ಲಾ ಜೋಸ್ಟರ್ ವೈರಸ್ ಕೆಲವೊಮ್ಮೆ ದೇಹದಲ್ಲಿ ಉಳಿದುಬಿಡುತ್ತವೆ. ರೋಗ ನಿರೋಧಕ ಶಕ್ತಿ ದುರ್ಬಲಗೊಂಡಾಗ ಈ ವೈರಸ್ ಮತ್ತೆ ದಾಳಿ ಮಾಡುತ್ತದೆ ಮತ್ತು ರಾಮ್ಸೆ ಹಂಟ್‌ ಸಿಂಡ್ರೋಮ್‌ಗೆ ಕಾರಣವಾಗುತ್ತದೆ.

ರಾಮ್ಸೆ ಹಂಟ್ ಸಿಂಡ್ರೋಮ್‌ಗೆ ಚಿಕಿತ್ಸೆ

ರಾಮ್ಸೆ ಹಂಟ್ ಸಿಂಡ್ರೋಮ್ ಅನ್ನು ಗುಣಪಡಿಸಬಹುದು. ಸರಿಯಾದ ಸಮಯಕ್ಕೆ ಸೂಕ್ತವಾದ ಚಿಕಿತ್ಸೆ ದೊರೆತರೆ ಮಾತ್ರ ಇದು ಸಾಧ್ಯ. ವಿಶೇಷವಾಗಿ ಈ ರೀತಿ ಆಗಿ 3 ದಿನಗಳೊಳಗೆ ಚಿಕಿತ್ಸೆ ಪ್ರಾರಂಭಿಸಿದರೆ ಅದನ್ನು ಗುಣಪಡಿಸಬಹುದು. ಈ ರೋಗಲಕ್ಷಣಗಳನ್ನು ಬಯಾಪ್ಸಿ, MRI ಮತ್ತು ರಕ್ತ ಪರೀಕ್ಷೆಯ ಮೂಲಕ ಕಂಡುಹಿಡಿಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read