BIG NEWS : ರಾಜ್ಯದ ಎಲ್ಲಾ ಶಾಲೆ, ಕಚೇರಿಗಳಲ್ಲಿ ‘ವಿದ್ಯುನ್ಮಾನ ಸೇವಾ ವಹಿ’ ಅನುಷ್ಠಾನಗೊಳಿಸುವಂತೆ ‘ಶಿಕ್ಷಣ ಇಲಾಖೆ’ ಆದೇಶ.!

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ವಿದ್ಯುನ್ಮಾನ ಸೇವಾ ವಹಿ’ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಏನಿದೆ ಆದೇಶದಲ್ಲಿ..?

ಹೆಚ್.ಆರ್.ಎಮ್.ಎಸ್.2.0 ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಸಂಬಂಧ ಹೆಚ್.ಆರ್.ಎಮ್.ಎಸ್.2.0 ತಂತ್ರಾಂಶದ ಅಂಗವಾದ ವಿದ್ಯುನ್ಮಾನ್ ಸೇವಾ ವಹಿಯನ್ನು (Electronic Service Register- ESR) ಯನ್ನು ಸಿದ್ಧಪಡಿಸಲಾಗಿದೆ. 2021-22 ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಈಗಾಗಲೇ ನೇಮಕಗೊಂಡಿರುವ ಮತ್ತು ನೇಮಕಗೊಳ್ಳುವ ಎಲ್ಲಾ ಅಧಿಕಾರಿಗಳು / ನೌಕರರುಗಳ ಸೇವಾ ವಹಿಯನ್ನು ಹೆಚ್.ಆರ್.ಎಮ್.ಎಸ್.2.0 ತಂತ್ರಾಂಶದ *ವಿದ್ಯುನ್ಮಾನ ಸೇವಾವಹಿ* ಯಲ್ಲಿಯೇ ನಿರ್ವಹಿಸುವಂತೆ ಉಲ್ಲೇಖದ 1,2,3 ಮತ್ತು 4 ರ ಸರ್ಕಾರದ ಆದೇಶಗಳಲ್ಲಿ ತಿಳಿಸಲಾಗಿರುತ್ತದೆ.

ಈ ಸಂಬಂಧ ಈ ಕಚೇರಿಯ ಉಲ್ಲೇಖ 5ರಲ್ಲಿನ ಸುತ್ತೋಲೆಗಳಲ್ಲಿ ವಿದ್ಯುನ್ಮಾನ್ ಸೇವಾ ವಹಿಯನ್ನು (ಇ.ಎಸ್.ಆರ್) ಅನುಷ್ಠಾನಗೊಳಿಸುವಂತೆ ಎಲ್ಲಾ ಸಕ್ಷಮ ಪ್ರಾಧಿಕಾರಿಗಳಿಗೆ / ಕಚೇರಿಯ ಮುಖ್ಯಸ್ಥರಿಗೆ ತಿಳಿಸಲಾಗಿರುತ್ತದೆ. ಮತ್ತು ಈ ಸಂಬಂಧ ದಿನಾಂಕ : 04-09-2024 ರಂದು ನಡೆದ ಸಭೆಯಲ್ಲಿ ಈ ಬಗ್ಗೆ ತರಬೇತಿಯನ್ನು ನೀಡಲಾಗಿರುತ್ತದೆ. ಹಾಗೂ ದಿನಾಂಕ:21/11/2024ರಂದು 2ನೇ ಬಾರಿ ತರಬೇತಿಯನ್ನು ನೀಡಲಾಗಿರುತ್ತದೆ.

ಪ್ರಸ್ತುತ ವಿದ್ಯುನ್ಮಾನ್ ಸೇವಾವಹಿ ಅನುಷ್ಠಾನಗೊಳಿಸುವ ಕಾರ್ಯವನ್ನು ಅತ್ಯಂತ ತ್ವರಿತವಾಗಿ ಮಾಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು ಸದರಿ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳು ಈ ಕೆಳಕಂಡಂತೆ ಇರುತ್ತದೆ.

ನೋಡಲ್ ಅಧಿಕಾರಿಗಳು (Nodal officer) : ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಕಚೇರಿ / ಅವರ ಆಯುಕ್ತರಕಚೇರಿ/ ವಿಭಾಗೀಯ ಕಚೇರಿ/ ಜಿಲ್ಲಾ ಹಂತದ / ತಾಲ್ಲೂಕ ಹಂತದ ಕಚೇರಿಯಲ್ಲಿ ಈ ಕಾರ್ಯದ ಅನುಷ್ಠಾನಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು ಸದರಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಕಚೇರಿಗಳಲ್ಲಿ ಈ ಕಾರ್ಯದ ಅನುಷ್ಠಾನ ಸಂಪೂರ್ಣ ಜವ್ಯಾರಿಯನ್ನು ಹೊಂದಿರುತ್ತಾರೆ.ಸಂಪನ್ಮೂಲ ಅಧಿಕಾರಿಗಳು(Resource Person): ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಕಚೇರಿ / ಅಪರ ಆಯುಕ್ತರ ಕಚೇರಿ/ ವಿಭಾಗೀಯ ಕಚೇರಿ/ ಜಿಲ್ಲಾ /ತಾಲ್ಲೂಕು ಹಂತದ (ತಾಲ್ಲೂಕಿಗೆ ಮಾತ್ರ ಇಬ್ಬರು) ಕಚೇರಿಯಲ್ಲಿ ಈ ಕಾರ್ಯದ ಅನುಷ್ಠಾನಕ್ಕಾಗಿ ಒಬ್ಬ ನುರಿತ ಹಾಗೂ ತಾಂತ್ರಿಕವಾಗಿ ಸಮರ್ಥರಿರುವ (Resource Person) ನೇಮಿಸಲಾಗಿದ್ದು,ನೋಡಲ್ ಅಧಿಕಾರಿಗಳ ಸಹಯೋಗದಿಂದ ತಮ್ಮ ವ್ಯಾಪ್ತಿಯಲ್ಲಿನ ಸಿಬ್ಬಂದಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿ.ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read