ಮೊಡವೆಗೆ ಮದ್ದು ಈ 5 ಹಣ್ಣುಗಳ ಸೇವನೆ

 

ಮೊಡವೆ ಪ್ರತಿಯೊಬ್ಬರಿಗೂ ಬೇಡದ ಅತಿಥಿ. ಯಾವಾಗ ಬೇಕಂದ್ರೆ ಆವಾಗ ಮುಖದ ಮೇಲೆ ಮೊಡವೆಗಳೇಳುತ್ತವೆ. ಅದ್ರಲ್ಲೂ ಯಾವುದಾದ್ರೂ ಫಂಕ್ಷನ್, ಪಾರ್ಟಿ, ಮದುವೆ, ಸಮಾರಂಭಗಳ ಸಮಯದಲ್ಲೇ ಮೊಡವೆ ಕಾಟ ಕೊಡುವುದು ಹೆಚ್ಚು.

ಮುಖದ ಅಂದವನ್ನು ಹಾಳು ಮಾಡಲು ಕಲೆಯನ್ನು ಉಳಿಸಿ ಹೋಗುತ್ತದೆ. ಮೊಡವೆ ಮಾಯವಾಗಬಹುದು ಅನ್ನೋ ಆಸೆಯಿಂದ ಎಲ್ರೂ ಬಗೆಬಗೆಯ ಕ್ರೀಮ್, ಔಷಧ, ಮನೆಮದ್ದು ಎಲ್ಲವನ್ನೂ ಮಾಡ್ತಾರೆ, ಆದ್ರೂ ಪಿಂಪಲ್ ಪ್ರಾಬ್ಲೆಮ್ ಮಾತ್ರ ಪರಿಹಾರವಾಗೋದಿಲ್ಲ. ಹಾಗಾಗಿ ಅದನ್ನೆಲ್ಲ ಬಿಟ್ಟು ಸಿಂಪಲ್ಲಾಗಿ ಈ ಐದು ಹಣ್ಣುಗಳನ್ನು ಸೇವಿಸಿ, ಮೊಡವೆಯನ್ನು ಹೊಡೆದೋಡಿಸಬಹುದು.

ಸೇಬುಹಣ್ಣು : ಇದರಲ್ಲಿ ನೀರಿನ ಅಂಶ ಮತ್ತು ಪೋಷಕಾಂಶಗಳು ಹೆಚ್ಚಿವೆ. ನಿಮ್ಮ ಚರ್ಮವನ್ನು ಆರೋಗ್ಯವಾಗಿಡಲು ಸೇಬುಹಣ್ಣು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ, ಇ ಮತ್ತು ಎ ಇರುವುದರಿಂದ ನಿಮ್ಮ ಚರ್ಮವನ್ನು ಬೆಳ್ಳಗೆ, ಮೃದುವಾಗಿಡುತ್ತದೆ. ಸೇಬುಹಣ್ಣನ್ನು ತಿನ್ನುವುದು ಮಾತ್ರವಲ್ಲ, ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬಹುದು.

ಬಾಳೆಹಣ್ಣು : ಇದೊಂದು ಶಕ್ತಿವರ್ಧಕ ಹಣ್ಣು ಅನ್ನೋದು ಎಲ್ರಿಗೂ ಗೊತ್ತೇ ಇದೆ. ಆರೋಗ್ಯಕ್ಕೂ ಹೇಳಿಮಾಡಿಸಿದಂಥದ್ದು. ಮೊಡವೆ ಜೊತೆಗಿನ ನಿಮ್ಮ ಗುದ್ದಾಟಕ್ಕೆ ಬಾಳೆಹಣ್ಣು ಸಾಥ್ ಕೊಡಲಿದೆ. ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾವನ್ನು ಬಾಳೆಹಣ್ಣು ನಾಶ ಮಾಡುತ್ತದೆ. ಚರ್ಮವನ್ನು ಮೃದುವಾಗಿ, ಕಾಂತಿಯುಕ್ತವಾಗಿಡುತ್ತದೆ. ಬಾಳೆಹಣ್ಣನ್ನು ಕೂಡ ಫೇಸ್ ಮಾಸ್ಕ್ ಆಗಿ ಬಳಸಬಹುದು.

ಪಪ್ಪಾಯ : ಇದರಲ್ಲಿ ವಿಟಮಿನ್ ಎ ಜೊತೆಗೆ ನಿಮ್ಮ ಆರೋಗ್ಯಕರ ಚರ್ಮಕ್ಕೆ ಬೇಕಾದ ಪೋಷಕಾಂಶಗಳಿವೆ. ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಉರಿಯೂತ ಮತ್ತು ಚರ್ಮ ಕೆಂಪಗಾಗುವಿಕೆ ಕಡಿಮೆಯಾಗುತ್ತದೆ.

ನಿಂಬೆಹಣ್ಣು : ಇದು ಸದಾಕಾಲ ತಾಜಾತನ ನೀಡುತ್ತದೆ. ಆ್ಯಂಟಿಒಕ್ಸಿಡೆಂಟ್ ನಂತೆ ಕೆಲಸ ಮಾಡುವ ನಿಂಬೆಹಣ್ಣು ದೇಹದಲ್ಲಿರುವ ಟಾಕ್ಸಿನ್ ಗಳನ್ನು ಹೊರಹಾಕುತ್ತದೆ. ನಿಂಬೆರಸವನ್ನು ನೀರಿಗೆ ಬೆರೆಸಿ ಕುಡಿಯಬಹುದು ಅಥವಾ ಮುಖಕ್ಕೆ ಹಚ್ಚಿಕೊಳ್ಳಬಹುದು. ಸತ್ತ ಚರ್ಮದ ಜೀವಕೋಶಗಳನ್ನು ಕೂಡ ಇದು ತೆಗೆದುಹಾಕುತ್ತದೆ. ಇದೊಂದು ನೈಸರ್ಗಿಕ ಕ್ಲೆನ್ಸರ್.

ಅವೊಕಾಡೊ : ಜಗತ್ತಿನಾದ್ಯಂತ ಅವೊಕಾಡೊ ಒಂದು ಆರೋಗ್ಯಕರ ಸೂಪರ್ ಫುಡ್ ಅಂತಾನೇ ಹೆಸರುವಾಸಿ. ಇದರಲ್ಲಿ ವಿಟಮಿನ್ ಇ ಹೇರಳವಾಗಿದೆ. ಅವೊಕಾಡೊ ಆ್ಯಂಟಿಒಕ್ಸಿಡೆಂಟ್ ಚರ್ಮದಲ್ಲಿನ ತೇವಾಂಶವನ್ನು ಕಾಪಾಡುತ್ತದೆ. ಜೊತೆಗೆ ಆರೋಗ್ಯವಾಗಿಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read