BREAKING : ಧರ್ಮಸ್ಥಳದಲ್ಲಿ15 ವರ್ಷಗಳ ಹಿಂದೆ ಬಾಲಕಿ ಅನುಮಾನಾಸ್ಪದ ಸಾವು ಕೇಸ್ ‘SIT’ ಗೆ ಹಸ್ತಾಂತರ.!

ಧರ್ಮಸ್ಥಳ : ಧರ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣವನ್ನು ಎಸ್ ಐ ಟಿಗೆ ಹಸ್ತಾಂತರ ಮಾಡಲಾಗಿದೆ.

ದೂರುದಾರ ಟಿ. ಜಯಂತ್ ಎನ್ನುವ ಹೊಸ ಸಾಕ್ಷಿದಾರ ಬಾಲಕಿಯ ಶವವನ್ನು ಹೂತಿರುವುದನ್ನು ಕಣ್ಣಾರೆ ನೋಡಿದ್ದೇನೆ ಎಂದು ಸಾಕ್ಷಿ ಹೇಳಿದ್ದರು. ಅಲ್ಲದೇ ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆಯನ್ನು ಎಸ್ ಐ ಟಿಗೆ ಹಸ್ತಾಂತರಿಸಲಾಗಿದೆ.

ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನುವ ದೂರಿಗೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯ ಎಸ್ಐಟಿ ಎದುರು ಆಗಮಿಸಿ ದೂರು ನೀಡಿದ್ದರು. ಜಯಂತ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

15 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಬಾಲಕಿಯೊಬ್ಬಳ ಮೃತದೇಹ ನೋಡಿದ್ದೇನೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆ ನಡೆಸದೆ ಬಾಲಕಿ ಶವ ಹೂತು ಹಾಕಲಾಗಿದೆ. ಇದೊಂದು ಕೊಲೆ ಪ್ರಕರಣವಾಗಿದೆ. ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಶವ ಹೂತು ಹಾಕಿರುವ ಸ್ಥಳ ನನಗೆ ಗೊತ್ತಿದೆ ಎಂದು ಎಸ್ಐಟಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.ಇಷ್ಟು ದಿನ ಪೊಲೀಸರಿಗೆ ಯಾಕೆ ಮಾಹಿತಿ ನೀಡಿಲ್ಲ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ ಜಯಂತ್, ತನ್ನ ಕುಟುಂಬದ ಹೆಣ್ಣು ಮಗಳು ಪದ್ಮಲತಾಗೆ ನ್ಯಾಯ ಸಿಕ್ಕಿಲ್ಲ. ಆಗ ನ್ಯಾಯ ಸಿಗುವ ವಿಶ್ವಾಸವಿರಲಿಲ್ಲ. ಹೀಗಾಗಿ ದೂರು ನೀಡಿರಲಿಲ್ಲ. ಈಗ ಎಸ್ಐಟಿ ಮೇಲೆ ವಿಶ್ವಾಸ ಇಟ್ಟು ಕಣ್ಣಾರೆ ನೋಡಿದ ವಿಚಾರದ ಬಗ್ಗೆ ದೂರು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read