ಪರ್ವತಗಳಲ್ಲೂ ನಯವಾಗಿ ಓಡಬಲ್ಲ ಅತ್ಯುತ್ತಮ ರೋಡ್‌ಸ್ಟರ್ ಬೈಕ್‌ಗಳು

ಭಾರತದ ರಸ್ತೆಗಳಿಗೆ ರೋಡ್‌ಸ್ಟರ್ ಬೈಕ್‌ಗಳು ಹೇಳಿಮಾಡಿಸಿದಂತಿರುತ್ತವೆ. ಈ ಬೈಕ್‌ಗಳು ಪರ್ವತಗಳಲ್ಲೂ ಆರಾಮಾಗಿ ಚಲಿಸಬಲ್ಲವು. ಈ ಬೈಕ್‌ಗಳ ಎಂಜಿನ್‌ಗಳು ಪವರ್‌ಫುಲ್ಲಾಗಿರುತ್ತವೆ. ವಿಶೇಷವಾಗಿ ಯುವಕರು ಈ ಬೈಕ್‌ಗಳನ್ನು ಇಷ್ಟಪಡುತ್ತಾರೆ. ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಪೋರ್ಟ್ಸ್‌ ಬೈಕ್‌ಗಳು ಮತ್ತು ರೋಡ್‌ಸ್ಟರ್‌ ಬೈಕ್‌ಗಳ ವಿವರ ಇಲ್ಲಿದೆ.

ಹಾರ್ಲೆ ಡೇವಿಡ್ಸನ್ X440

ಹಾರ್ಲೆ ಡೇವಿಡ್ಸನ್ X440 ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಬೈಕ್‌ಗಳಲ್ಲೊಂದು. ಇದು ಕಂಪನಿಯ ಅಗ್ಗದ ಬೈಕ್ ಎಂದು ಪರಿಗಣಿಸಲಾಗಿದೆ. ಈ ಬೈಕ್‌ನಲ್ಲಿ ಕಂಪನಿಯು 398 ಸಿಸಿ ಏರ್ ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಒದಗಿಸಿದೆ. ಈ ಎಂಜಿನ್ 38 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6 ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ ಸಂಪರ್ಕ ಹೊಂದಿದೆ. ಎಲ್ಇಡಿ ಹೆಡ್ಲೈಟ್ ಮತ್ತು ಬ್ಲೂಟೂತ್ ಕನೆಕ್ಷನ್‌, ಎಲ್‌ಸಿಡಿ ಇನ್‌ಸ್ಟ್ರುಮೆಂಟ್‌  ಕನ್ಸೋಲ್‌ನಂತಹ ಫೀಚರ್‌ಗಳು ಕೂಡ ಈ ಬೈಕ್‌ನಲ್ಲಿವೆ. ಇದರ ಎಕ್ಸ್ ಶೋ ರೂಂ ಬೆಲೆ 2.40 ಲಕ್ಷ ರೂಪಾಯಿ.

ಟ್ರಯಂಪ್‌ ಸ್ಪೀಡ್‌ 400

ಟ್ರಯಂಫ್ ಸ್ಪೀಡ್ 400 ಕೂಡ ಅತ್ಯುತ್ತಮ ರೋಡ್‌ಸ್ಟರ್ ಬೈಕ್‌ಗಳಲ್ಲೊಂದು. ಕಂಪನಿಯು ಈ ಬೈಕ್ ಅನ್ನು 2023ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬೈಕ್‌ನಲ್ಲಿ 398 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಇದು 37.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6 ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸಂಪರ್ಕ ಹೊಂದಿದೆ. ಈ ಬೈಕ್‌ನ ಬೆಲೆ 2.25 ಲಕ್ಷ ರೂಪಾಯಿ.

ಹೋಂಡಾ CB 350

ಹೋಂಡಾದ ಮೈಲೇಜ್ ಬೈಕ್‌ಗಳ ಜೊತೆಗೆ ರೋಡ್‌ಸ್ಟರ್ ಬೈಕ್‌ಗಳು ಸಹ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿವೆ. ಹೋಂಡಾ CB 350 ಕಂಪನಿಯ ಪ್ರಬಲ ರೋಡ್‌ಸ್ಟರ್ ಬೈಕ್. ಈ ಬೈಕ್‌ನಲ್ಲಿ 348.36 ಸಿಸಿ ಸಿಂಗಲ್ ಸಿಲಿಂಡರ್ ಒಬಿಡಿ2ಬಿ ಎಂಜಿನ್ ಇದೆ. ಇದು 15.5 kW ಶಕ್ತಿಯೊಂದಿಗೆ 29.4 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಸ್ಮಾರ್ಟ್‌ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಮ್, ಸೆಮಿ ಅನಲಾಗ್ ಮೀಟರ್, ಡ್ಯುಯಲ್ ಚಾನೆಲ್ ಎಬಿಎಸ್ ಜೊತೆಗೆ ಎಲ್‌ಇಡಿ ಲೈಟ್‌ ಕೂಡ ಇದೆ. ಇದು 15.2 ಲೀಟರ್‌ ಇಂಧನ ಟ್ಯಾಂಕ್ ಅನ್ನು  ಹೊಂದಿದೆ. ಈ ಬೈಕಿನ ಎಕ್ಸ್ ಶೋ ರೂಂ ಬೆಲೆ 2.18 ಲಕ್ಷ ರೂಪಾಯಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read