ಹಂಪೆಯ ಆಕರ್ಷಣೆ ಹಜಾರ ʼರಾಮಸ್ವಾಮಿʼ ದೇಗುಲ

ರಾಮಾಯಣದ ಹಲವು ಪ್ರಸಂಗಗಳನ್ನು ಉಬ್ಬು ಕೆತ್ತನೆಯ ಮೂಲಕ ಇಲ್ಲಿ ಹೇಳಲಾಗುತ್ತದೆ. ಇದು ಭಗವಾನ್ ವಿಷ್ಣುವಿಗೆ ಸಮರ್ಪಿಸಿದ ಹಂಪಿಯ ಜನಪ್ರಿಯ ದೇವಾಲಯ. ಇದರ ಗೋಡೆಗಳು 15ನೆಯ ಶತಮಾನದ ಕಲಾಕೃತಿಗಳನ್ನು ಹೊಂದಿದ್ದು, ಅನೆ, ಕುದುರೆ, ಸೈನಿಕರು ಮತ್ತು ನೃತ್ಯಗಾತಿಯರ ಮೂರ್ತಿಗಳನ್ನು ಕೆತ್ತಲಾಗಿದೆ.

ಇಲ್ಲಿಗೆ ಬರುವ ಪ್ರವಾಸಿಗರಿಗೆ ಅಂದಿನ ಕಾಲದ ವಾಸ್ತುಶಿಲ್ಪ, ಸಂಸ್ಕೃತಿಯ ನೋಟದ ರಸದೌತಣವೇ ಸಿಗುತ್ತದೆ. ದೇವಾಲಯ ಪ್ರವೇಶಿಸುವ ಮೊದಲೇ ಮಟ್ಟಸವಾದ ಮೇಲ್ಛಾವಣಿಯ ದ್ವಾರ ಮಂಟಪ ಸಿಗುತ್ತದೆ. ಈ ಆಕರ್ಷಕ ಮಂಟಪದ ಮಧ್ಯ ಕಪ್ಪು ಹಜಾರ ಕೆತ್ತನೆಯಿದೆ. ಇದರ ಸುತ್ತ ವಿಷ್ಣುವಿನ ಒಂಬತ್ತನೇ ಅವತಾರವಾದ ಬುದ್ಧನ ವಿಗ್ರಹ ಕೆತ್ತಲಾಗಿದೆ.

ಇನ್ನೊಂದು ಕಡೆಯಲ್ಲಿ ಗರ್ಭಗುಡಿಗೆ ಹೋಗುವ ಬಾಗಿಲಿದೆ. ಜೆನನಾ ಎನ್ಕ್ಲೊಸರ್ ಮತ್ತು ಲೋಟಸ್ ಮಹಲ್ ಇದರ ಅಸುಪಾಸಿನಲ್ಲಿರುವ ಮತ್ತೆರಡು ಅಕರ್ಷಣೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಹಂಪೆ ಐತಿಹಾಸಿಕ ಪ್ರಸಿದ್ಧಿ ಸ್ಥಳ. ಇಲ್ಲಿಗೆ ಭೇಟಿ ನೀಡಿದವರು ಮರೆಯದೆ ನೋಡಬೇಕಾದ ಸ್ಥಳದಲ್ಲಿ ಇದೂ ಒಂದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read