ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದ ‘ಅಫ್ಘಾನ್’ ಆಟಗಾರ : ‘ಗುರ್ಬಾಜ್’ ಮಾನವೀಯ ನಡೆಗೆ ನೆಟ್ಟಿಗರು ಫಿದಾ..!

ಅಪ್ಘನಿಸ್ತಾನ ಕ್ರಿಕೆಟ್ ತಂಡ ಸದ್ಯ ಭಾರತದಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್   ವಿಶ್ವಕಪ್ ನಿಂದ  ಹೊರಬಿದ್ದಿದೆಯಾದರೂ, ಆದರೆ ಅಫ್ಘಾನ್ (Afghanistan ) ಆಟಗಾರರ ಅದ್ಭುತ ಆಟ ಎಲ್ಲರ ಮನ ಗೆದ್ದಿದೆ.

ಅಫ್ಘಾನಿಸ್ತಾನ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ಇದೀಗ ಮೈದಾನದಿಂದ ಹೊರಗೆ ಮಾಡಿದ ಮಾನವೀಯ ಕೆಲಸಕ್ಕಾಗಿ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ದಾರೆ.

ಹೌದು, ಗುಜರಾತ್ನ ಅಹ್ಮದಾಬಾದ್ನಲ್ಲಿ ದಕ್ಷಿಣ ಆಫ್ರೀಕಾದ ವಿರುದ್ಧ ಕೊನೆಯ ಪಂದ್ಯವನ್ನಾಡಿತ್ತು ಅಪ್ಘನಿಸ್ತಾನ. ಮರುದಿನ ಮುಂಜಾನೆ ಮೂರು ಗಂಟೆಯ ಹೊತ್ತಿಗೆ ಇಡೀ ಅಹ್ಮದಾಬಾದ್ ಮಲಗಿರುವಾಗ, ಅಪ್ಘನಿಸ್ತಾನದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಒಂದು ಟ್ಯಾಕ್ಸಿ ಬುಕ್ ಮಾಡಿಕೊಂಡು ರಸ್ತೆಗೆ ಇಳಿದಿದ್ದಾರೆ.

ಟ್ಯಾಕ್ಸಿಯಲ್ಲಿ ದಾರಿಯುದ್ದಕ್ಕೂ ಫುಟ್ಪಾತ್ಗಳಲ್ಲಿ ಮಲಗಿದ್ದ ಜನರ ಬಳಿ ಹೋಗಿ, ಅವರನ್ನು ಎಚ್ಚರಗೊಳಿಸದೇ, ಅವರ ಪಕ್ಕದಲ್ಲಿ ತನಗೆ ಸಾಧ್ಯವಾದಷ್ಟು ದುಡ್ಡು ಇಟ್ಟು ಬಂದಿದ್ದಾರೆ. ಅಹ್ಮದಾಬಾದ್ನ ಹಲವು ಕಡೆ ಹೀಗೆಯೇ ಹಣ ಹಂಚಿದ್ದಾರೆ. ಅಹಮದಾಬಾದ್ನ ಬೀದಿಗಳಲ್ಲಿ ಬಡವರಿಗೆ ದೀಪಾವಳಿಯನ್ನು ಆಚರಿಸಲು ಗುರ್ಬಾಜ್ ಹಣವನ್ನು ನೀಡಿದ್ದಾರೆ. ಯಾರೋ ಇದನ್ನು ನೋಡಿ ಗುರ್ಬಾರ್ಜ್ ಗೆ ಗೊತ್ತಿಲ್ಲದೇ ಹಾಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಜನರ ಕಷ್ಟಗಳಿಗೆ ಸ್ಪಂದಿಸುವವನೇ ಈ ಜಗತ್ತಿನ ಶ್ರೇಷ್ಟ ವ್ಯಕ್ತಿ. ಲವ್ಯೂ ರಹಮಾನುಲ್ಲಾ ಗುರ್ಬಾಜ್. ನಿಮ್ಮ ತಂಡ ವಿಶ್ವಕಪ್ ಗೆದ್ದಿಲ್ಲ ಆದರೆ ಹೃದಯಗಳನ್ನು ಗೆದ್ದಿದ್ದೀರಿ ಎಂದು ಬಳಕೆದಾರರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

https://twitter.com/KKRiders/status/1723580026531279325?ref_src=twsrc%5Etfw%7Ctwcamp%5Etweetembed%7Ctwterm%5E1723580026531279325%7Ctwgr%5E659012cb21225709858fd855ee631bf9d9ccda6e%7Ctwcon%5Es1_&ref_url=https%3A%2F%2Fkannada.news18.com%2Fnews%2Fsports%2Fworld-cup-2023-rahmanullah-gurbaz-silently-gave-money-to-the-needy-people-on-the-streets-of-ahmedabad-skb-1439703.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read