BREAKING : ‘ಏರ್ ಇಂಡಿಯಾ’ ಗಗನಸಖಿಯ ಭೀಕರ ಕೊಲೆ ಪ್ರಕರಣ : ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾದ ಆರೋಪಿ

ನವದೆಹಲಿ: ಆಘಾತಕಾರಿ ಬೆಳವಣಿಗೆಯಲ್ಲಿ, 24 ವರ್ಷದ ಗಗನಸಖಿಯನ್ನು ಕೊಂದ ಆರೋಪಿ ವಿಕ್ರಮ್ ಅಟ್ವಾಲ್ ಶುಕ್ರವಾರ ಅಂಧೇರಿ ಪೊಲೀಸ್ ಠಾಣೆಯ ಲಾಕಪ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಕ್ರಮ್ ಅಟ್ವಾಲ್ ತನ್ನ ಬಟ್ಟೆಯಿಂದ ಹಗ್ಗ ಮಾಡಿಕೊಂಡು ಲಾಕಪ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಅಂಧೇರಿಯ ಅಪಾರ್ಟ್ ಮೆಂಟ್ ನಲ್ಲಿ ಗಗನಸಖಿಯನ್ನು ಕತ್ತು ಸೀಳಿ ಕೊಂದ ಆರೋಪದ ಮೇಲೆ ಸೋಮವಾರ (ಸೆಪ್ಟೆಂಬರ್ 4) ಬಂಧಿಸಲ್ಪಟ್ಟ 40 ವರ್ಷದ ಆರೋಪಿಯನ್ನು ಪೊಲೀಸರು ಮಂಗಳವಾರ ಅಂಧೇರಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ವಿಚಾರಣೆಯ ಸಮಯದಲ್ಲಿ, ಪೊವಾಯಿಯ ಚಾಂದಿವಲಿಯ ತುಂಗಾ ಗ್ರಾಮದ ನಿವಾಸಿ ಮತ್ತು ಮನೆಕೆಲಸಗಾರ ವಿಕ್ರಮ್ ಅಟ್ವಾಲ್ ತಾನು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಲು ನಿರ್ಧರಿಸಿದ್ದೆ, ಆದರೆ ಅವಳು ಇದಕ್ಕೆ ತಡೆಯೊಡ್ಡಿದ್ದಳಿಂದ ಅತ್ಯಾಚಾರ ಎಸಗಲು ಆಗಲಿಲ್ಲ. ನಂತರ ಕತ್ತು ಕೊಯ್ದು ಕೊಲೆ ಮಾಡಿದೆ ಎಂದು ಪೊಲೀಸ್ ತನಿಖೆ ವೇಳೆ ಒಪ್ಪಿಕೊಂಡಿದ್ದನು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಆದರೆ ವಿಕ್ರಮ್ ಅಟ್ವಾಲ್ ತನ್ನ ಲಾಕಪ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಛತ್ತೀಸ್ ಗಢ ಮೂಲದ ರೂಪಲ್ ಓಗ್ರೆ ಈ ವರ್ಷದ ಏಪ್ರಿಲ್ ನಲ್ಲಿ ಏರ್ ಇಂಡಿಯಾಗೆ ಆಯ್ಕೆಯಾದ ನಂತರ ಮುಂಬೈಗೆ ಸ್ಥಳಾಂತರಗೊಂಡಿದ್ದರು.ಅಂಧೇರಿಯ ಐಷಾರಾಮಿ ಹೌಸಿಂಗ್ ಸೊಸೈಟಿಯಲ್ಲಿರುವ ತನ್ನ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದಳು . ಈ ವೇಳೆ ಅವರು ಶವವಾಗಿ ಪತ್ತೆಯಾಗಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read