ರೆಸ್ಟೋರೆಂಟ್ ಮಾಲೀಕನ ಆನ್ಲೈನ್ ಚಾಣಾಕ್ಷತೆಗೆ ಫಿದಾ ಆದ ನೆಟ್ಟಿಗರು

ವಿಚಿತ್ರ ಎನಿಸಬಹುದಾದ ಹೆಸರುಗಳಿಂದಲೇ ಖ್ಯಾತಿ ಪಡೆದಿರುವ ಅನೇಕ ರೆಸ್ಟೋರೆಂಟ್‌ಗಳ ಬಗ್ಗೆ ಕೇಳಿದ್ದೇವೆ. ನ್ಯೂಯಾರ್ಕ್‌ ನಲ್ಲಿರುವ ಈ ರೆಸ್ಟೋರೆಂಟ್ ಇಂಥದ್ದೇ ಕೆಲಸ ಮಾಡಿ ಆನ್ಲೈನ್‌ನಲ್ಲಿ ವೈರಲ್ ಆಗಿದೆ.

’ಥಾಯ್ ಫುಡ್ ನಿಯರ್‌ ಮೀ’ ಹೆಸರಿನ ಈ ರೆಸ್ಟೋರೆಂಟ್‌, ತನ್ನ ’ಎಸ್‌ಇಓ’ ಗೇಮ್‌ ಅನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ದಿದೆ.

ಸಾಮಾನ್ಯವಾಗಿ ತಮ್ಮಲ್ಲಿ ಉಣಬಡಿಸುವ ರೀತಿಯ ಖಾದ್ಯಗಳ ಶೈಲಿಯ ಹೆಸರುಗಳನ್ನು ರೆಸ್ಟೋರೆಂಟ್‌ಗಳು ಹಾಕಿಕೊಳ್ಳುವುದು ಸಹಜ.

ಆದರೆ ಗೂಗಲ್‌ನಲ್ಲಿ ಥಾಯ್ ಆಹಾರ ಪ್ರಿಯರು ಹಾಕುವ ಸರ್ಚ್ ಕ್ವರಿಯನ್ನೇ ತನ್ನ ಹೆಸರನ್ನಾಗಿ ಇಟ್ಟುಕೊಂಡಿರುವ ಈ ರೆಸ್ಟೋರೆಂಟ್, ಅಂತರ್ಜಾಲದ ಮೂಲಕ ತನ್ನ ಬ್ಯುಸಿನೆಸ್ ವ್ಯಾಪಿಸಲು ಚಿಂತಿಸುವವರಿಗೆ ಹೊಸ ಗೋಲುಗಳನ್ನು ಸೃಷ್ಟಿಸಿದೆ.

ಆನ್ಲೈನ್ ಮಾರ್ಕೆಟಿಂಗ್ ಯುಗದಲ್ಲಿ ಬಹುಮುಖ್ಯ ಅಸ್ತ್ರವಾದ ಎಸ್‌ಇಓ ಬಳಕೆಯ ಅತ್ಯಂತ ಸ್ಮಾರ್ಟ್ ಹ್ಯಾಕ್‌ಗಳಲ್ಲಿ ಇದೂ ಒಂದಾಗಿದೆ ಎಂದು ನೆಟ್ಟಿಗರು ಈ ರೆಸ್ಟೋರೆಂಟ್ ಮಾಲೀಕನನ್ನು ಮೆಚ್ಚಿ ಕಾಮೆಂಟ್‌ಗಳನ್ನು ಹಾಕಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read