ನೇಕಾರರಿಗೆ ಗುಡ್ ನ್ಯೂಸ್: ಪವರ್ ಲೂಮ್ ಮಗ್ಗಗಳಿಗೆ 20 HPವರೆಗೆ ಉಚಿತ ವಿದ್ಯುತ್

ಬಾಗಲಕೋಟೆ: 10 ಹೆಚ್.ಪಿ.ವರೆಗಿನ ಪವರ್ ಲೂಮ್ ಮಗ್ಗಗಳಿಗೆ ಈಗಿರುವ ಉಚಿತ ವಿದ್ಯುತ್ ಸೌಲಭ್ಯವನ್ನು 20 ಹೆಚ್‌ಪಿ ವರೆಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಶುಕ್ರವಾರ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಚುನಾವಣೆಗೆ ಮೊದಲು ಘೋಷಿಸಿದಂತೆ 10 ಹೆಚ್.ಪಿ. ವರೆಗಿನ ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಈ ಪ್ರಮಾಣವನ್ನು 20 ಹೆಚ್‌ಪಿವರೆಗೆ ವಿಸ್ತರಿಸಬೇಕೆಂದು ನೇಕಾರರು ಬೇಡಿಕೆ ಇಟ್ಟಿದ್ದು, ಮುಂದಿನ ವರ್ಷ ಈ ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.

ನೇಕಾರ ಸಮ್ಮಾನ್ ಯೋಜನೆ ಅಡಿ 5,000 ರೂ. ಬಿಡುಗಡೆ ಮಾಡಲಾಗಿದೆ. ವಿವಿಧ ಇಲಾಖೆಗಳ ಸಮವಸ್ತ್ರ ಪೂರೈಕೆ ಗುತ್ತಿಗೆಯನ್ನು ನೇಕಾರರಿಗೆ ನೀಡಿದರೆ ಅನುಕೂಲವಾಗಲಿದ್ದು, ಈ ನೆಟ್ಟಿನಲ್ಲಿಯೂ ಸರ್ಕಾರ ಚಿಂತನೆ ನಡೆಸಲಿದೆ. ಮಹಾರಾಷ್ಟ್ರ ಮಾದರಿಯಲ್ಲಿ ಜವಳಿ ಇಲಾಖೆ ವ್ಯಾಪ್ತಿಯ ನೇಕಾರಿಕೆ ಮೂರು ನಿಗಮಗಳನ್ನು ಸೇರಿಸಿ ಒಂದೇ ನಿಗಮ ಸ್ಥಾಪಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read