ಸ್ಪೇನ್ ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮೆಡಿಟರೇನಿಯನ್ ಕರಾವಳಿಯುದ್ದಕ್ಕೂ ಪಟ್ಟಣಗಳಲ್ಲಿ ಭಾರೀ ನೀರು ತುಂಬಿದ್ದು ವಾಹನಗಳು ಮಳೆ ನೀರಲ್ಲಿ ಕೊಚ್ಚಿಹೋಗ್ತಿವೆ.
ಇಂತಹ ಭಯಾನಕ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಚಾಲಕನೊಬ್ಬ ಪ್ರವಾಹದ ನೀರಿನಲ್ಲಿ ಸಿಲುಕಿದ್ದು ಕಾರ್ ನಿಯಂತ್ರಣ ಕಳೆದುಕೊಂಡು ಮಳೆ ನೀರಲ್ಲಿ ಕೊಚ್ಚಿಹೋಗಿದೆ.
ಬಿಬಿಸಿ ವರದಿಯ ಪ್ರಕಾರ ದಕ್ಷಿಣ ಕರಾವಳಿಯ ಮೊಲಿನಾ ಡಿ ಸೆಗುರಾದಲ್ಲಿ ಚಾಲಕನು ಪ್ರವಾಹಕ್ಕೆ ಸಿಲುಕಿದ ರಸ್ತೆಯನ್ನು ದಾಟಲು ಪ್ರಯತ್ನಿಸಿದಾಗ ಘಟನೆ ಸಂಭವಿಸಿದೆ. ಭಾರೀ ಮಳೆಯು ಮಧ್ಯ ಸ್ಪೇನ್, ರಾಜಧಾನಿ ಮ್ಯಾಡ್ರಿಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಹಾನಿಯುಂಟುಮಾಡಿದೆ.
ಬೆನಿಕಾಸಿಮ್, ಒರೊಪೆಸಾ ಡೆಲ್ ಮಾರ್ ಮತ್ತು ಕ್ಯಾಬನೆಸ್ ಪಟ್ಟಣಗಳು ಹೆಚ್ಚು ಬಾಧಿತ ಪ್ರದೇಶಗಳಾಗಿವೆ ಎಂದು ಕ್ಯಾಸ್ಟಲೋನ್‌ನಲ್ಲಿನ ಅಗ್ನಿಶಾಮಕ ಸೇವೆಗಳು ತಿಳಿಸಿವೆ.
https://twitter.com/MeteoSE/status/1661799714029797407?ref_src=twsrc%5Etfw%7Ctwcamp%5Etweetembed%7Ctwterm%5E1661799714029797407%7Ctwgr%5Ebae934fdf36f694face3fb58ec4911d58cdb7197%7Ctwcon%5Es1_&ref_url=https%3A%2F%2Fwww.ndtv.com%2Ffeature%2Fterrifying-video-shows-car-sweeping-backwards-by-fast-flowing-floodwater-in-spain-4072888