BREAKING : ಉಡುಪಿಯಲ್ಲಿ ಭೀಕರ ‘ಅಗ್ನಿ ಅವಘಡ’ : 10 ಮೀನುಗಾರಿಕೆ ಬೋಟ್ ಗಳು ಸುಟ್ಟು ಕರಕಲು

ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿಯ ಮ್ಯಾಗನೀಸ್ ರಸ್ತೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 10 ಬೋಟುಗಳು ಸುಟ್ಟು ಭಸ್ಮವಾಗಿದೆ.

ಉಡುಪಿಯ ಗಂಗೊಳ್ಳಿಯಲ್ಲಿನ ಕಡಲ ಕಿನಾರೆ ತೀರದಲ್ಲಿ ಲಂಗರು ಹಾಕಿದ್ದ ಏಳು ಬೋಟುಗಳು ಸುಟ್ಟು ಕರಕಲಾಗಿದೆ. ಬೋಟುಗಳಿಗೆ ಪೂಜೆ ಮಾಡಿ ನಿಲ್ಲಿಸಲಾಗಿತ್ತು. ಈ ವೇಳೆ ಕಾರ್ಮಿಕರು ಪಟಾಕಿ ಸಿಡಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಬೋಟ್ ಸುಟ್ಟು ಕರಕಲಾಗಿದ್ದರಿಂದ ಲಕ್ಷಾಂತರ ಹಣ ನಷ್ಟ ಆಗಿದೆ ಎಂದು ತಿಳಿದು ಬಂದಿದೆ. ಯಾವುದೇ ಸಾವು-ನೋವು ಉಂಟಾಗಿಲ್ಲ. ಅಗ್ನಿ ಶಾಮಕ ದಳ, ಸಾರ್ವಜನಿಕರು ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದಾರೆ.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read