ಬೇಸಿಗೆ ಬೇಗೆ ನಿವಾರಿಸಲು ತಂಪು ತಂಪು ಎಳನೀರು, ಸೊಪ್ಪು ಶರಬತ್

ಬೇಸಿಗೆಯ ಬಿಸಿ ಹೆಚ್ಚಾದಾಗ ಅನ್ನ, ತಿಂಡಿಗಳಿಗಿಂತ ತಂಪನೆಯ ಪಾನೀಯಗಳನ್ನು ಸೇವಿಸಿದರೆ ಶರೀರ ಮತ್ತು ಮನಸ್ಸು ಹಾಯಾಗಿರುತ್ತದೆ. ಎಳನೀರು, ಪುದೀನಾ ರಸ, ಮಜ್ಜಿಗೆ ಹೀಗೆ ಇವನ್ನೆಲ್ಲಾ ಎಷ್ಟು ಅಂತ ಕುಡಿಯುವುದು.

ಆದ್ದರಿಂದ ಈ ಬಾರಿ ಎಳನೀರು ಹಾಗೂ ಸೊಪ್ಪಿನ ಕಾಂಬಿನೇಶನ್ ಇರುವ ರಸದ ರುಚಿಯನ್ನು ಟೆಸ್ಟ್ ಮಾಡಿ ನೋಡೋಣ.

ಬೇಕಾಗುವ ಸಾಮಾಗ್ರಿಗಳು
ಎಳನೀರು 1 ಕಪ್
ಹರಿವೆ ಸೊಪ್ಪು ರಸ 1/2 ಕಪ್
ಪುದೀನಾ ಎಲೆಗಳು ಸ್ವಲ್ಪ
ನಿಂಬೆ ರಸ 1 ಚಮಚ
ಎಳೆ ಸೊಪ್ಪು ಸ್ವಲ್ಪ
ಚಕ್ರದಂತೆ ಕತ್ತರಿಸಿದ ನಿಂಬೆ 2 ಚೂರು
ಉಪ್ಪು ರುಚಿಗೆ ತಕ್ಕಷ್ಟು

ನಿಂಬೆ ಹಣ್ಣನ್ನು ಬಳಸಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ

ಮಾಡುವ ವಿಧಾನ
ಎಳನೀರು, ಹರಿವೆ ಸೊಪ್ಪಿನ ರಸ, ಪುದಿನ ಎಲೆಗಳು, ಎಳೆ ಸೊಪ್ಪು, ನಿಂಬೆ ರಸ, ಚಕ್ರದಂತೆ ಕತ್ತರಿಸಿದ ನಿಂಬೆ ಹಾಕಿ ಎಲ್ಲವನ್ನು ಕಲಕಬೇಕು. ಆನಂತರ ಗಾಜಿನ ಲೋಟಕ್ಕೆ ಶರಬತ್ತನ್ನು ಹಾಕಿ ನಾಲ್ಕೈದು ಐಸ್ ಕ್ಯೂಬ್ ಗಳನ್ನು ಬೇಕಿದ್ದರೆ ಸೇರಿಸಬಹುದು. ಅಗತ್ಯವಿದ್ದರೆ ಸ್ವಲ್ಪ ಉಪ್ಪನ್ನು ಸೇರಿಸಿ ಶರಬತ್ತನ್ನು ಕುಡಿದರೆ ರುಚಿಯಾಗಿರುತ್ತದೆ. ಇಲ್ಲದೆ ಹೋದರೆ ಫ್ರಿಡ್ಜ್ ನಲ್ಲಿಟ್ಟು ಶರಬತ್ತನ್ನು ತಂಪಾಗಿ ಕುಡಿದರು ಹಿತವಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read