BIG BREAKING: ಕಲ್ಲು ಕ್ವಾರಿ ಕುಸಿತ; ಹತ್ತಕ್ಕೂ ಅಧಿಕ ಸಾವು

ಕಲ್ಲು ಕ್ವಾರಿ ಕುಸಿತಗೊಂಡ ಪರಿಣಾಮ ಹತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ಮಿಜೋರಾಮಿನ ಐಜ್ವಾಲ್ ಜಿಲ್ಲೆಯಲ್ಲಿ ನಡೆದಿದೆ. ಅಲ್ಲದೆ ಅವಶೇಷಗಳಡಿ ಹಲವರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇಂದು ಬೆಳಗಿನ ಜಾವ 6:00 ಗಂಟೆ ಸುಮಾರಿಗೆ ಐಜ್ವಾಲ್ ದಕ್ಷಿಣ ಭಾಗದ ಹೊರ ವಲಯದಲ್ಲಿರುವ ಕಲ್ಲು ಕ್ವಾರಿಯಲ್ಲಿ ಈ ಕುಸಿತ ಸಂಭವಿಸಿದ್ದು, ನಿರಂತರವಾಗಿ ಸುರಿದ ಧಾರಾಕಾರ ಮಳೆಯೇ ಇದಕ್ಕೆ ಕಾರಣವೆಂದು ಮೂಲಗಳು ಹೇಳಿವೆ.

ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿರುವ ಸ್ಥಳೀಯಾಡಳಿತ ಘಟನಾ ಸ್ಥಳದಿಂದ 10 ಮೃತ ದೇಹಗಳನ್ನು ಹೊರತೆಗೆದಿದ್ದು ಅವಶೇಷಗಳಡಿ ಇನ್ನೂ ಸಿಲುಕಿರುವ ಹಲವರನ್ನು ರಕ್ಷಿಸುವ ಕಾರ್ಯ ನಡೆಸಿದೆ. ಆದರೆ ಧಾರಾಕಾರ ಮಳೆಯ ಕಾರಣಕ್ಕೆ ಪರಿಹಾರ ಕಾರ್ಯಾಚರಣೆ ವಿಳಂಬವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read