ನವದೆಹಲಿ: ಸಂದೇಶ ಕಳುಹಿಸಿದವರು ಯಾವ ಉದ್ದೇಶಕ್ಕೆ ಕಳುಹಿಸಿದ್ದಾರೆ ಎನ್ನುವುದನ್ನು ಇನ್ನು ಮುಂದೆ ಸುಲಭವಾಗಿ ಗುರುತಿಸಬಹುದಾಗಿದೆ. ಸಂದೇಶ ಕಳುಹಿಸಿದವರ ಹೆಸರಿನ ನಂತರ ನಿರ್ದಿಷ್ಟ ಇಂಗ್ಲಿಷ್ ಅಕ್ಷರ ಸೇರಿಸಿ ಸಂದೇಶದ ಉದ್ದೇಶವೇನು ಎಂಬುದನ್ನು ತಿಳಿಯುವಂತಹ ವ್ಯವಸ್ಥೆ ಜಾರಿ ಯಾಗಿದೆ.
ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾ ಕಂಪನಿಗಳ ಭಾರತೀಯ ಸೆಲ್ಯೂಲ್ಲುಲಾರ್ ಆಪರೇಟರ್ ಗಳ ಸಂಘ ಈ ಮಾಹಿತಿ ನೀಡಿದೆ.
ಸೇವಾ ಉದ್ದೇಶದ ಸಂದೇಶಕ್ಕೆ ಎಸ್, ಪ್ರಚಾರದ ಉದ್ದೇಶಕ್ಕೆ ಪಿ, ವಹಿವಾಟಿಗೆ ಸಂಬಂಧಿಸಿದ ಸಂದೇಶಕ್ಕೆ ಟಿ, ಸರ್ಕಾರಿ ಸಂದೇಶಕ್ಕೆ ಜಿ ಎಂದು ಎಸ್ಎಂಎಸ್ ಸಂದೇಶ ಶೀರ್ಷಿಕೆ ನಂತರ ಈ ಅಕ್ಷರಗಳು ಇದ್ದರೆ ಅವು ಸಂದೇಶದ ಉದ್ದೇಶವನ್ನು ಹೇಳುತ್ತವೆ.
ಎಸ್ಎಂಎಸ್ ಶೀರ್ಷಿಕೆಯಲ್ಲಿ ಇಂಗ್ಲಿಷ್ ನ ನಿರ್ದಿಷ್ಟ ಅಕ್ಷರವನ್ನು ನಮೂದಿಸಿ ಆ ಸಂದೇಶದ ಉದ್ದೇಶವೇನು ಎಂಬುದನ್ನು ಬಳಕೆದಾರರಿಗೆ ದೂರ ಸಂಪರ್ಕ ಸೇವಾ ಕಂಪನಿಗಳು ತಿಳಿಸುವ ಕೆಲಸ ಆರಂಭಿಸಿವೆ. ಇದರಿಂದ ಪಾರದರ್ಶಕತೆ ಹೆಚ್ಚಾಗಿದ್ದು, ಗ್ರಾಹಕರ ಹಿತ ಕಾಯಲಾಗಿದೆ. ತಮಗೆ ಬಂದಿರುವ ಸಂದೇಶ ಯಾವುದಕ್ಕೆ ಸಂಬಂಧಿಸಿದೆ ಎಂಬುದನ್ನು ಬಳಕೆದಾರರು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಸೇವಾ ಉದ್ದೇಶ, ಪ್ರಚಾರದ ಉದ್ದೇಶ, ವಹಿವಾಟು, ಸರ್ಕಾರಿ ಸಂದೇಶಗಳನ್ನು ಬಳಕೆದಾರರು ಸುಲಭವಾಗಿ ಗುರುತಿಸಬಹುದಾಗಿದೆ.