BIG NEWS: ತೆಲಂಗಾಣದಲ್ಲಿ ಬಿಆರ್ ಎಸ್ ನ 6 ಸಚಿವರಿಗೆ ಭಾರಿ ಹಿನ್ನಡೆ

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಮುನ್ನಡೆ ಸಾಧಿಸಿದ್ದು, ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದೆ. ಆಡಳಿತಾರೂಢ ಬಿಆರ್ ಎಸ್ ಪಕ್ಷ ಹಿನ್ನಡೆ ಪಡೆದುಕೊಂಡಿದೆ. ಸಿಎಂ ಕೆ.ಚಂದ್ರಶೇರ್ ರಾವ್ ಸೇರಿದಂತೆ ಘಟಾನುಘಟಿ ನಾಯಕರೇ ಸ್ವಕ್ಷೇತ್ರಗಳಲ್ಲಿ ಸೋಲನುಭವಿಸಿದ್ದಾರೆ.

ಸಿಎಂ ಕೆ.ಸಿ.ಆರ್ ಸಂಪುಟದ 6 ಸಚಿವರಿಗೆ ಭಾರಿ ಹಿನ್ನಡೆಯಾಗಿದೆ. ಸಚಿವರಾದ ಕೆ.ಟಿ.ರಾಮರಾವ್, ಎರಬೆಲ್ಲಿ, ಇಂದ್ರಕಿರಣ್ ರೆಡ್ಡಿ, ಕೊಪ್ಪುಲ ಈಶ್ವರ, ಪುವ್ವಾಡ ಅಜಯ್, ನಿರಂಜನ್ ರೆಡ್ಡಿ, ಪ್ರಶಾಂತ್ ರೆಡ್ಡಿಗೆ ತೀವ್ರ ಹಿನ್ನಡೆಯಾಗಿದೆ.

ಇನ್ನು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿರುವ ಬಿಜೆಪಿಯ ಈಟಲ ರಾಜೇಂದ್ರ ಕೂಡ ಹಿನ್ನಡೆಯಲಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಬಹುತೇಕ ನಿಚ್ಚಳವಾಗಿದ್ದು, ಹೈದರಾಬಾದ್ ನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read