ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅರೆಸ್ಟ್

ಹೈದರಾಬಾದ್: ತೆಲಂಗಾಣ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನ ಇಂದಿರಾ ಪಾರ್ಕ್‌ ನಲ್ಲಿ ಕೆಸಿಆರ್ ಸರ್ಕಾರದ ವಿರುದ್ಧ 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ನಮ್ಮ ಬಂಧನ ನಿಮ್ಮ ಪತನ ಕೆಸಿಆರ್ ಗಾರು.. ತೆಲಂಗಾಣ ಜನತೆಯ ಹಕ್ಕುಗಳಿಗಾಗಿ ಹೋರಾಟ ಮುಂದುವರೆಯುತ್ತದೆ. ಕೆಸಿಆರ್ ಸರ್ಕಾರವು ತನ್ನ ದಬ್ಬಾಳಿಕೆಯ ಆಡಳಿತದ ವಿರುದ್ಧ ಬಿಜೆಪಿಯ ಶಾಂತಿಯುತ ಪ್ರತಿಭಟನೆಯನ್ನು ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ರೆಡ್ಡಿ ಅವರು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ನಿರುದ್ಯೋಗಿ ಯುವಕರ ಪರ ಬಿಜೆಪಿ ಆಯೋಜಿಸಿದ್ದ 24 ಗಂಟೆಗಳ ಪ್ರತಿಭಟನಾ ಉಪವಾಸವನ್ನು ಉದ್ದೇಶಿಸಿ ಮಾತನಾಡಿದ ರೆಡ್ಡಿ, ಉದ್ಯೋಗ ಪಡೆಯುವ ಭರವಸೆಯೊಂದಿಗೆ ತೆಲಂಗಾಣ ರಾಜ್ಯ ಸ್ಥಾಪನೆಗಾಗಿ ಲಕ್ಷಾಂತರ ಯುವಕರು ಹೋರಾಡಿದ್ದಾರೆ. ತೆಲಂಗಾಣ ರಾಜ್ಯ ಸ್ಥಾಪನೆಗಾಗಿ ಸುಮಾರು 1,200 “ತೆಲಂಗಾಣ ಮಕ್ಕಳು” ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಆದರೆ, ಬಿಆರ್‌ಎಸ್ ಸರ್ಕಾರ ನಿರುದ್ಯೋಗಿ ಯುವಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

https://twitter.com/kishanreddybjp/status/1701973869999841462

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read