ದಾರುಣ ಘಟನೆ: ಮರದ ಮೇಲೆಯೇ ಹೃದಯಾಘಾತದಿಂದ ವ್ಯಕ್ತಿ ಸಾವು: ತಲೆಕೆಳಗಾಗಿ ನೇತಾಡಿದ ಶವ

ಭುವನಗಿರಿ: ತೆಲಂಗಾಣದಲ್ಲಿ ತಾಳೆ ಮರದ ಮೇಲೆಯೇ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ತೆಲಂಗಾಣದ ಭುವನಗಿರಿ ನಗರದಲ್ಲಿ ಈ ದಾರುಣ ಘಟನೆ ನಡೆದಿದೆ.

ತಾಳೆ ಮರದಿಂದ ಮೃತ ವ್ಯಕ್ತಿಯನ್ನು ಕೆಳಗಿಳಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಮೃತ ವ್ಯಕ್ತಿಯನ್ನು ಲಕ್ಷ್ಮಯ್ಯ ಎಂದು ಗುರುತಿಸಲಾಗಿದೆ. ಇವರು ರಾಜಣ್ಣಗುಡೆಂ ಗ್ರಾಮದ ನಿವಾಸಿಯಾಗಿದ್ದಾರೆ.

ಲಕ್ಷ್ಮಯ್ಯ ಅವರು ತಾಳೆ ಮರಗಳಿಂದ ಮಕರಂದ ಪಡೆಯಲು ಮರ ಹತ್ತಿದ್ದಾರೆ. ನೀರಾ ಮಾಗಿದ ತಾಳೆ ಹಣ್ಣಿನ ಪರಿಮಳ ಹೊಂದಿರುವ ಸಿಹಿಯಾದ ಆಲ್ಕೊಹಾಲ್ ಯುಕ್ತ ಪಾನೀಯವಾಗಿದೆ.

ಲಕ್ಷ್ಮಯ್ಯ ಅವರು ಮರದ ಮೇಲೆ ಇದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ತಾಳೆ ಮರದಲ್ಲಿ ತಲೆಕೆಳಗಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕ್ರೇನ್ ತರಿಸಿ ಮೃತದೇಹವನ್ನು ಕೆಳಗೆ ಇಳಿಸಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕ್ರೇನ್‌ ನ ಹುಕ್‌ಗೆ ಕಟ್ಟಿ ಶವವನ್ನು ಮರದಿಂದ ಕೆಳಗೆ ಎಳೆದಿರುವುದು ಕಂಡುಬಂದಿದೆ. ಹೃದಯಾಘಾತಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

https://twitter.com/TeluguScribe/status/1747542758674641293

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read