ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವಕ ಸಾವು; ಶಾಕಿಂಗ್ ವಿಡಿಯೋ ವೈರಲ್

ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಹಲವು ಪ್ರಕರಣಗಳು ಈಗಾಗಲೇ ನಡೆದಿವೆ ಇದೀಗ ಇದಕ್ಕೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ 24 ವರ್ಷದ ಯುವಕನೊಬ್ಬ ತೀವ್ರ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗುರುವಾರದಂದು ಹೈದರಾಬಾದಿನ ಸಿಕಂದರಾಬಾದ್ ನಲ್ಲಿ ಈ ಘಟನೆ ನಡೆದಿದ್ದು, 24 ವರ್ಷದ ವಿಶಾಲ್ ಸಾವನ್ನಪ್ಪಿದವರಾಗಿದ್ದಾರೆ. ಮೊಂಡಾ ಮಾರ್ಕೆಟ್ ಏರಿಯಾದ ಗಣ್ಸಿ ಬಜಾರ್ ನಿವಾಸಿಯಾಗಿರುವ ಇವರು 2020ರಲ್ಲಿ ಪೊಲೀಸ್ ಪೇದೆಯಾಗಿ ಆಯ್ಕೆಯಾಗಿದ್ದು, ಆಸಿಫ್ ನಗರ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು.

ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಸಿಕಂದರಾಬಾದ್ ನ ಮರ್ರೆಡ್ ಪಲ್ಲಿಯಲ್ಲಿರುವ ಜಿಮ್ ಗೆ ತೆರಳಿದ್ದ ಇವರು ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೃದಯಾಘಾತವೇ ಇವರ ಸಾವಿಗೆ ಕಾರಣವೆಂದು ಹೇಳಲಾಗಿದೆ.

https://twitter.com/gyara_murali/status/1628888698971652097?ref_src=twsrc%5Etfw%7Ctwcamp%5Etweetembed%7Ctwterm%5E1628888698971652097%7Ctwgr%5Eebe6116468dce84b631e327cc6a8695e754fc01c%7Ctwcon%5Es1_&ref_url=https%3A%2F%2Fhittvtelugu.com%2Fbreakingnews%2Fheart-stroke-hyderabad-constable-collapsed-while-doing-gym-18626.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read