VIDEO: 62ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಮಾನವೇರಿದ ತೆಲಂಗಾಣ ರೈತ ಮಹಿಳೆ

’ಮೈ ವಿಲೇಜ್ ಶೋ’ ಎಂಬ ಜನಪ್ರಿಯ ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತಿಗೆ ಬಂದಿರುವ ತೆಲಂಗಾಣದ ರೈತ ಮಹಿಳೆ ಮಿಲ್ಕುರಿ ಗಂಗವ್ವ ತಮ್ಮ ವಿಡಿಯೋ ಸರಣಿಗಳ ಮೂಲಕ ತೆಲಂಗಾಣ ಹಾಗೂ ಅದರ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.

ತಮ್ಮ 62ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಮಾನವೇರಿದ ಗಂಗವ್ವ, ಈ ಸ್ಮರಣೀಯ ಕ್ಷಣಗಳನ್ನು ಅಂತರ್ಜಾಲದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ ಗಂಗವ್ವ, ತಮ್ಮ ಬೋರ್ಡಿಂಗ್ ಪಾಸ್ ಬಳಸಿಕೊಂಡು ಗೇಟ್ ಮೂಲಕ ಹಾದು ಹೋಗುತ್ತಿರುವುದನ್ನು ಕಾಣಬಹುದಾಗಿದೆ.

ಮೊದಲ ಬಾರಿಗೆ ವಿಮಾನವೇರುವ ಸಂತಸದಲ್ಲಿ ಮಗುವಿನಂತೆ ಉಲ್ಲಾಸಿತರಾದ ಗಂಗವ್ವ ಸೀಟ್ ಬೆಲ್ಟ್ ಹಾಕಿಕೊಳ್ಳಲು ತಮಗೆ ಹೇಗೆ ಗೊಂದಲವಾಯಿತು ಎಂದೂ ತೋರಿದ್ದಾರೆ. ತಮ್ಮ ಪ್ರದೇಶದಲ್ಲಿ ಮಾತನಾಡುವ ರೀತಿಯಲ್ಲಿ ತೆಲುಗು ಮಾತನಾಡುವ ಗಂಗವ್ವ ತಮ್ಮ ಮೊದಲ ವಿಮಾನಯಾನದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಮುಗ್ಧ ಮನಸ್ಸಿನ ಈ ಅನುಭವಗಳನ್ನು ನೆಟ್ಟಿಗರು ವೀಕ್ಷಿಸಿ ಎಂಜಾಯ್‌ ಮಾಡಿದ್ದು, ಬಹಳಷ್ಟು ಲೈಕ್ಸ್ ಮತ್ತು ಕಾಮೆಂಟ್‌ಗಳು ಸಂದಾಯವಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read