ದುಬೈ ಏರ್ ಶೋನಲ್ಲಿ ತೇಜಸ್ ವಿಮಾನ ಅಪಘಾತದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಅವರಿಗೆ ಐಎಎಫ್ ವಿಂಗ್ ಕಮಾಂಡರ್ ಅಫ್ಶಾನ್ ಅವರು ಭಾನುವಾರ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು.
ಸಮವಸ್ತ್ರದಲ್ಲಿದ್ದ ಅವರು ಕಣ್ಣೀರು ಸುರಿಸುತ್ತಾ ತಮ್ಮ ಪತಿಗೆ ನಮಸ್ಕರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರ ಮೃತದೇಹವನ್ನು ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿರುವ ಅವರ ಊರು ಪಟಿಯಾಲ್ಕರ್ಗೆ ತಂದ ನಂತರ ಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
ಶುಕ್ರವಾರ ವಿಮಾನ ಅಪಘಾತದಲ್ಲಿ ಅವರು ನಿಧನರಾದರು, ನಂತರ ಅವರ ದೇಹವನ್ನು ಶನಿವಾರ ಚೆನ್ನೈಗೆ ಮತ್ತು ಭಾನುವಾರ ಅವರ ಪೂರ್ವಜರ ಹಳ್ಳಿಗೆ ತರಲಾಯಿತು. ನಂತರ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸ್ಯಾಲ್ ಅವರನ್ನು ಸಮರ್ಪಿತ ಯುದ್ಧ ಪೈಲಟ್ ಮತ್ತು ಸಂಪೂರ್ಣ ವೃತ್ತಿಪರ ಎಂದು ಭಾರತೀಯ ವಾಯುಪಡೆ ಬಣ್ಣಿಸಿದೆ. ಅವರು ಅಚಲ ಬದ್ಧತೆ, ಅಸಾಧಾರಣ ಕೌಶಲ್ಯ ಮತ್ತು ಅಚಲ ಕರ್ತವ್ಯ ಪ್ರಜ್ಞೆಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು ಎಂದು ಹೇಳಿದೆ.
ಸೇವೆಗೆ ಸಮರ್ಪಿತವಾದ ಅವರಿಗೆ ಯುಎಇ ಅಧಿಕಾರಿಗಳು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಹಾಜರಿದ್ದು, ಗೌರವದ ಬೀಳ್ಕೊಡುಗೆ ನೀಡಿದ್ದಾರೆ. ಈ ತೀವ್ರ ದುಃಖದ ಸಮಯದಲ್ಲಿ ಐಎಎಫ್ ಅವರ ಕುಟುಂಬದೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ ಮತ್ತು ಅವರ ಧೈರ್ಯ, ಭಕ್ತಿ ಮತ್ತು ಗೌರವದ ಪರಂಪರೆಯನ್ನು ಗೌರವಿಸುತ್ತದೆ ಎಂದು ಐಎಎಫ್ ಹೇಳಿದೆ.
ವಿಂಗ್ ಕಮಾಂಡರ್ ಸ್ಯಾಲ್ ಅವರ ಪತ್ನಿ ಮತ್ತು ಐದು ವರ್ಷದ ಮಗಳನ್ನು ಅಗಲಿದ್ದಾರೆ.
#WATCH | Himachal Pradesh: Wing Commander Afshan salutes her husband, Wing Commander Namansh Syal, as she pays her last respects to him.
— ANI (@ANI) November 23, 2025
Wing Commander Namansh Syal lost his life in the LCA Tejas crash in Dubai on 21st November. pic.twitter.com/DPKwARut4r
